ಮಡಿಕೇರಿ: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಇನ್ನೂ ಜಗತ್ತು ಅಂದರೆ ಏನು ಎಂದು ತಿಳಿಯದ 2 ವರ್ಷದ ಪುಟಾಣಿ ಮಗುವಿನ ಮೇಲೆ ಕಾಮುಕನೊಬ್ಬ ದೌರ್ಜನ್ಯ ನಡೆಸಿದ್ದಾನೆ.
ಕೇವಲ ಎರಡು ವರ್ಷದ ಮಗುವಿನ ಮೇಲೆ 45 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಾಪುರದಿಂದ ಸುಮಾರು 20 ಕಿ.ಮೀ ದೂರದ ಎಸ್ಟೇಟ್ನಲ್ಲಿ ಬುಧವಾರ ಸಂಜೆ ಕೃತ್ಯ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇಲ್ಲಿ ಜಾರ್ಖಂಡ್ ಮೂಲದ ಕುಟುಂಬವೊಂದು ವಾಸಿಸುತ್ತಿತ್ತು. ಮನೆಯಲ್ಲಿ ಮಗುವನ್ನು ಮಲಗಿಸಿ ತಂದೆ ಸಣ್ಣ ಕೆಲಸದ ಮೇಲೆ ಸ್ವಲ್ಲ ಹೊರಗಡೆ ಬಂದಿದ್ದಾರೆ. ಆಗ ಮನೆಗೆ ಎಂಟ್ರಿ ಕೊಟ್ಟ ಕುಡುಕ ಕಾಮುಕ ಮಗುವಿನ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಮಗು ಒಂದೇ ಸಮನೆ ಬೊಬ್ಬೆ ಹೊಡೆದಾಗ ತಂದೆ ಓಡಿ ಬಂದಿದ್ದಾರೆ. ಈ ವೇಳೆ ಕಾಮುಕನ ದುಷ್ಕೃತ್ಯ ಬಯಲಾಗಿದೆ. ಸದ್ಯ ಮಗುವನ್ನು ಆಸ್ಪತ್ರೆಗೆ ದಾಕಳಿಸಲಾಗಿದ್ದು, ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.