News Karnataka Kannada
Thursday, May 02 2024
ಮಡಿಕೇರಿ

ಮಡಿಕೇರಿ: ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರತಿಭಟನೆ

Community health officials protest
Photo Credit : By Author

ಮಡಿಕೇರಿ: ತಮ್ಮ ಸೇವೆ ಕಾಯಂಗೊಳಿಸಬೇಕು, 15 ಸಾವಿರ ರೂ. ಪ್ರೋತ್ಸಾಹಧನ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಶುಕ್ರವಾರ ಡಿಹೆಚ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2016-17ನೇ ಸಾಲಿನಿಂದ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಪ್ರಾಥಮಿಕ ಸಮಗ್ರ 12 ಆರೋಗ್ಯ ಸೇವೆಗಳನ್ನು ಹೊರತುಪಡಿಸಿ ಇಲಾಖೆಯ ಬೇರೆ ಬೇರೆ ಕೆಲಸಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಕೇಂದ್ರದ ಸ್ವಚ್ಛತೆಯನ್ನು ಅಧಿಕಾರಿಗಳೇ ತಮ್ಮ ಸ್ವಂತ ಹಣ ಹಾಕಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೇರೆ ರಾಜ್ಯಗಳಲ್ಲಿ 15 ಸಾವಿರ ರೂ. ಪ್ರೋತ್ಸಾಹಧನ ಇದ್ದರೂ ಕರ್ನಾಟಕದಲ್ಲಿ ಕೇವಲ 8 ಸಾವಿರ ರೂ. ಮಾತ್ರ ಕೊಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಡಿಹೆಚ್‌ಒ ಡಾ. ವಂಕಟೇಶ್ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಕೆ.ಸಿ., ತಮ್ಮ ಕೆಲಸಕ್ಕೆ ಅಡ್ಡಿ ಆಗುವ ಕಿರುಕುಳಗಳನ್ನು ನಿಲ್ಲಿಸಬೇಕು. ಉದ್ದೇಶಪೂರ್ವಕವಾಗಿ ಗ್ರಾಮೀಣ ಸೇವೆಯಿಂದ ಡೈವರ್ಟ್ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರಕಾರದ ಮಹತ್ವದ ಯೋಜನೆಯಲ್ಲಿ ದುಡಿಯುತ್ತಿರುವ ಪದವೀಧರ ಮತ್ತು ಪರಿಣಿತ ಆರೋಗ್ಯ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ತಮ್ಮ ಬೇಡಿಕೆಗಳು ಇರುವ ಮನವಿಯನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ಡಿಹೆಚ್‌ಒ ಮುಖಾಂತರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಿಗೆ ಕಳುಹಿಸಿಕೊಟ್ಟರು. ಆರ್‌ಸಿಹೆಚ್‌ಒ ಡಾ. ಗೋಪಿನಾಥ್, ಡಿಪಿಸಿ ಡಾ. ಶಾಂಭವಿ ಈ ವೇಳೆ ಇದ್ದರು. ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಕೆ.ಸಿ., ಉಪಾಧ್ಯಕ್ಷೆ ರಮ್ಯಾ ವಿ., ಪ್ರಧಾನ ಕಾರ್ಯದರ್ಶಿ ದೀಪು ಎಸ್.ಆರ್., ಮಿಲನ್ ಕೆ.ಪಿ., ಸಹಕಾರ್ಯದರ್ಶಿ ವಿಕ್ರಂ ಎ.ಯು., ಖಜಾಂಚಿಗಳಾದ ಪ್ರಿಯಾ ಎ.ಎಂ., ಮನು ಎನ್.  ಪದಾಧಿಕಾರಿಗಳಾದ ಪುಷ್ಪಾ ವಸಂತ್
ಬಡಿಗೇರ್, ವಿದ್ಯಾ ಬಿ.ಆರ್., ಧರಣೇಶ್ ಜೆ.ಡಿ., ಬ್ರಿಜೇಶ್ ಬಿ.ಎನ್., ಭರತ್ ಎಸ್.ಎಲ್., ಶಶಿಧರ್ ಹೆಚ್.ಆರ್., ಸುನಿಲ್ ಎ.ಎಸ್., ಭವ್ಯಾ ಕೆ.ಕೆ.,ದುಶ್ಯಂತ್ ಪಿ.ವಿ., ವನಿತಾ, ಸಂಜಯ್, ಸಿಂಧು ಸೇರಿದಂತೆ ಜಿಲ್ಲೆಯಾದ್ಯಂತ ಸೇವೆ ಸಲ್ಲಿಸುತ್ತಿರುವ 130 ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು