News Karnataka Kannada
Sunday, April 28 2024
ಮಡಿಕೇರಿ

ಮಡಿಕೇರಿ: ಸಂಸತ್ ಅಧಿವೇಶನದ ವೇಳೆ ದೆಹಲಿಗೆ ತೆರಳಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ

Madikeri: A delegation of Karnataka Growers' Union went to Delhi during the Parliament session.
Photo Credit : By Author

ಮಡಿಕೇರಿ, ಡಿ.24: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದೆಹಲಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಖಾತೆಯ ಕೃಷಿ ಸಚಿವರು ಹಾಗೂ ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ,, ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ ಸಂಸತ್ತಿನ ವ್ಯಾವಹಾರಿಕ ಸಚಿವ ಪ್ರಹ್ಲಾದ್ ಜೋಶಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎಂ.ಬಸವೇಗೌಡ , ವಾಣಿಜ್ಯ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್‍ ಅವರುಗಳನ್ನು ಭೇಟಿ ಮಾಡಿತು.

ಕಾಫಿಬೆಳೆಗಾರರ ಪ್ರಮುಖವಾದ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಯ ಪ್ರಮುಖರಿಗೆ ಮನವಿ ಮೂಲಕ ಸಲ್ಲಿಸಲಾಯಿತು.

3 ಲಕ್ಷದವರೆಗಿನ ಸಾಲ ಪಡೆದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಬ್ಯಾಂಕುಗಳಿಂದ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸಾಲದ ಪ್ರಮಾಣವನ್ನು ಹೆಚ್ಚುಪಡಿಸಬೇಕು. ಕಾಫಿ ಇತರೆ ಸಾಲಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ವಾಣಿಜ್ಯ ಬ್ಯಾಂಕ್‍ನಿಂದ ಕಾಫಿ ಸಾಲಕ್ಕೆ ಬ್ಯಾಂಕ್ ಬಡ್ಡಿದರವನ್ನು ಕಡಿಮೆಮಾಡಬೇಕು, ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸಬೇಕು, ಕೃಷಿಯಲ್ಲೇ ತೊಡಗಿಸಿಕೊಂಡಿರುವ ರೈತರಿಗೆ ಸಿಬಿಲ್‍ನ್ನು ಅನ್ವಯಿಸಬಾರದು.

ಕಾಫಿಗೂ ಸಹ ಕಾಳುಮೆಣಸು , ಅಡಿಕೆಗೆ ಇರುವಂತೆ ಹವಾಮಾನಾಧಾರಿತ ಬೆಳೆವಿಮೆಯನ್ನು ಅಳವಡಿಸಬೇಕು, ಕೇಂದ್ರ ಸರ್ಕಾರದಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಬಜೆಟ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನವನ್ನು ನೀಡಬೇಕು. ಇದರಿಂದ ಮಾನವ-ಪ್ರಾಣಿ ಸಂಘರ್ಷವನ್ನು ಯಶಸ್ವಿಯಾಗಿ ತಡೆಗಟ್ಟಲು ಸಹಾಯವಾಗುತ್ತದೆ.

ರಾಷ್ಟ್ರೀಯ ವಿಪತ್ತು ಯೋಜನೆ (ಎನ್.ಡಿ.ಆರ್.ಎಫ್.)ಯಿಂದ ಕೊಡುತ್ತಿರುವ ಪರಿಹಾರವನ್ನು 10 ಹೆಕ್ಟೇರ್ ವರೆಗೆ ವಿಸ್ತರಿಸಬೇಕು ಮತ್ತು ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಕನಾ೯ಟಕ ಬೆಳೆಗಾರರ ಒಕ್ಕೂಟದ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್‍ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಇದ್ದರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಕೖಷ್ಣಪ್ಪ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು