News Karnataka Kannada
Wednesday, May 01 2024
ಕ್ಯಾಂಪಸ್

ಉಜಿರೆ: ಸೃಜನಶೀಲತೆಯಿಂದ ಸಾಧನೆ ಸಾಧ್ಯ- ಡಿ.ಯದುಪತಿ ಗೌಡ

Ujire: Creativity is the only way to achieve: D Yadupathi Gowda
Photo Credit : News Kannada

ಉಜಿರೆ: ಜ್ಞಾನ ಪಡೆಯಲು ಹಲವಾರು ಮಾರ್ಗಗಳಿವೆ, ಅವುಗಳತ್ತ ಸಾಗಬೇಕಾಗಿರುವುದು ನಮ್ಮ ಕರ್ತವ್ಯ. ಇಕೋ ಸೃಜನ ಎಂದರೆ ಸಾಹಿತ್ಯ ಭಾಷೆಯಲ್ಲಿ ತಗೋ ಸೃಜನಶೀಲತೆ ಎಂದರ್ಥ ಎಂದು ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲ ಡಿ.ಯದುಪತಿ ಗೌಡ ಹೇಳಿದರು.

ಎಸ್.ಡಿ.ಎಂ.ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಸಹಯೋಗದಲ್ಲಿ ನಡೆದ ಇಕೋ ಸೃಜನ್ ೨೦೨೨ರ ಕಾರ್ಯಕ್ರಮನ್ನು ಉದ್ಘಾಟಿಸಿ ಇವರು ಮಾತನಾಡಿದರು. ಬತ್ತಿ ಹಾಗೂ ಎಣ್ಣೆ ಬೇರೆ ಬೇರೆಯಾಗಿದ್ದರೆ ದೀಪ ಉರಿಯಲು ಸಾಧ್ಯವಿಲ್ಲ. ಇವೆರಡು ಒಂದಾಗಿ ಎಣ್ಣೆ ಹೀರಿದಾಗ ಮಾತ್ರ ದೀಪ ಬೆಳಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ನಾಲ್ಕು ಗೋಡೆಗಳ ಮಧ್ಯೆ ಕುಳಿತರೆ ಸಾಧನೆ ಸಾಧ್ಯವಾಗುವುದಿಲ್ಲ, ಅದಕ್ಕಾಗಿ ಇಂಥಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಪ್ರತಿಭೆ, ಕೌಶಲ್ಯ, ಸೃಜನಶೀಲತೆಯನ್ನು ಹೊರಹಾಕಬೇಕು. ವಿಶಾಲವಾದ ಜಗತ್ತಿನಲ್ಲಿ ವಿಶೇಷವಾದ ಅವಕಾಶಗಳಿರುತ್ತವೆ ನಮ್ಮ ಕೌಶಲ್ಯದಂದ ಅವುಗಳನ್ನು ಕಂಡುಕೊಳ್ಳಬೇಕು ಎಂದು ಪ್ರೋ.ಯದುಪತಿ ಗೌಡ ಆಶಿಸಿದರು.

ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು ಸುಮ್ಮನೆ ಅಲ್ಲ, ನಮಗಿಂದು ಯದುಪತಿ ಇಕೋ ಸೃಜನ್ ಶಬ್ದಕ್ಕೆ ಹೊಸ ಅರ್ಥ ಕಲ್ಪಿಸಿ ಕೊಟ್ಟರು. ನಮಗೆ ಬಾಯಿಪಾಠ ಮಾಡುವ ಗಿಳಿಗಳು ಬೇಡ ಸೃಜನಶೀಲತೆ ಹೊಂದಿರುವ ಹಾರಾಡುವ ಹಕ್ಕಿಗಳು ಬೇಕು. ಅದಕ್ಕೆ ನಿಮ್ಮಲ್ಲಿರುವ ಪ್ರತಿಭೆ ಅನಾವರಣ ಆಗಬೇಕಿದೆ, ಸ್ಪರ್ಧೆಯೆಂದಮೇಲೆ ಸೋಲು ಗೆಲುವು ಸಹಜ. ಅದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎ.ಜಯಕುಮಾರ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಣರಾಜ ಸ್ವಾಗತ ಕೋರಿದರು, ವಿಭಾಗದ ವಿದ್ಯಾರ್ಥಿನಿ ಅನ್ನಪೂರ್ಣ ನಿರೂಪಣೆ ಹಾಗೂ ವಿಭಾಗದ ಸಹಾಯಕ ಉಪನ್ಯಾಸಕ ಡಾ. ನಾಗರಾಜ ಪೂಜಾರಿ ವಂದನಾರ್ಪಣೆ ನಡೆಸಿಕೊಟ್ಟರು. ತಾಲೂಕಿನ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು