News Karnataka Kannada
Thursday, May 09 2024
ಮಡಿಕೇರಿ

ಮಾಕುಟ್ಟ ಅರಣ್ಯಕ್ಕೆ ಕೇರಳದ ತ್ಯಾಜ್ಯ, ಇಂದು ಮತ್ತೆ 2 ವಾಹನಗಳ ವಶ

Kerala waste dumped in Makutta forest, 2 more vehicles seized today
Photo Credit : By Author

ಮಾಕುಟ್ಟ: ಮಾಕುಟ್ಟ ಅರಣ್ಯಕೆ ಕೇರಳ ರಾಜ್ಯ ದಿಂದ ತ್ಯಾಜ್ಯ ವನ್ನು ಸುರಿಯಲು ಬಂದ ಒಂದು ಲಾರಿ, ಮತ್ತು ಪಿಕ್ ಅಪ್ ಜೀಪ್ ಅನ್ನು ಮಾ ಕುಟ್ಟ ಅರಣ್ಯ ಸಿಬ್ಬಂದಿ ಗಳು ವಶಕೆ ಇಂದು ಬೆಳಿಗ್ಗೆ ಪಡೆದು ಕೊಂಡಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶವಾದ ಮಾಕುಟ ಅರಣ್ಯಕ್ಕೆ ಕೇರಳದಿಂದ ನಿರಂತರವಾಗಿ ಕಸವನ್ನು ಹಾಕುತ್ತಿರುವ ಬಗ್ಗೆ ಚಾನೆಲ್ ಕೂರ್ಗ್ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚುತ್ತುಕೊಂಡು ರಸ್ತೆ ಬದಿಯ ಕಸವನ್ನೆಲ್ಲ ಸುಟ್ಟು ಹಾಕಿ ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ ಒಂದು ವಾರದಿಂದ ತ್ಯಾಜ್ಯವನ್ನು ತಂದು ಸುರಿಯುತ್ತಿರುವ ವಾಹನಗಳನ್ನು ಮತ್ತು ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಇಷ್ಟೆಲ್ಲ ಕಾನೂನು ಕ್ರಮ ಕೈಗೊಂಡರು ಕೂಡ ಮತ್ತೆ ಪುನಃ ಕೇರಳದ ತ್ಯಾಜ್ಯ ವಸ್ತುಗಳು ಮಾಕುಟ್ಟ ಪ್ರದೇಶಕ್ಕೆ ಬರುತ್ತಿದೆ. ಇಂದು ಬೆಳಗಿನ ಜಾವ ಮಾಕುಟ್ಟ ಅರಣ್ಯ ಸಿಬ್ಬಂದಿಗಳು ಕೇರಳದಿಂದ ತ್ಯಾಜ್ಯವನ್ನು ತಂದು ಇಲ್ಲಿ ಸುರಿಯಲು ಯತ್ನಿಸುತ್ತಿದ್ದ ಒಂದು ಲಾರಿ ಮತ್ತು ಪಿಕ್ ಅಪ್ ಜೀಪನ್ನು ವಶಪಡಿಸಿಕೊಂಡು ಈ ಸಂಬಂಧ ಕೆಲವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು