ಕೊಚ್ಚಿ: ಕೇರಳದಲ್ಲಿ ಓಣಂ ಹಬ್ಬದ ಭರ್ಜರಿ ತಯಾರಿಗಳ ನಡೆಯುತ್ತಿದೆ. ಈ ನಡುವೆ ಮಾದಕವಸ್ತುಗಳ ಸಮರ ಸಾರಿದ ರಾಜ್ಯ ಅಬಕಾರಿ ಇಲಾಖೆ, 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 168 ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಓಣಂ ಹಬ್ಬದ ಪ್ರಯುಕ್ತ ಆಗಸ್ಟ್ 5 ರಂದು ಅಬಕಾರಿ ಇಲಾಖೆಯ ಅಧಿಕಾರಿಗಳು ವಿವಿಧ ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
ಈ ವೇಳೆ ಸುಮಾರು 360 ಲೀಟರ್ ಸ್ಪಿರಿಟ್, 96 ಲೀಟರ್ ಅರಕ್, 221 ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯ, 44 ಲೀಟರ್ ಬಿಯರ್, 15 ಕೆ.ಜಿ. ಗಾಂಜಾ, 2 ಗಾಂಜಾ ಗಿಡಗಳು, 16 ಗ್ರಾಂ ಎಂಡಿಎಂಎ, 57 ಗ್ರಾಂ ಹೆರಾಯಿನ್ ಮತ್ತು 74 ಕೆಜಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಶೇಷ ಕಾರ್ಯಾಚರಣೆ ವೇಳೆ 73 ಅಬ್ಕಾರಿ ಪ್ರಕರಣಗಳು, 60 ಎನ್ ಡಿ ಪಿಎಸ್ ಆಕ್ಟ್ ಮತ್ತು ಸಿ ಒ ಪಿ ಟಿ ಎ ಆಕ್ಟ್ ಅಡಿ 416 ಪ್ರಕರಣಗಳನ್ನು ದಾಖಲಿಸಿ ಒಟ್ಟು 168 ಮಂದಿಯನ್ನು ಬಂಧಿಸಲಾಗಿದೆ.