News Karnataka Kannada
Saturday, May 04 2024
ಮಡಿಕೇರಿ

ಕೊಡಗು ಜಿಲ್ಲಾ ಮಾಲೀಕರು ಹಾಗೂ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ

Dheedir strike, kodagu district owners and drivers discuss issues faced by them
Photo Credit : By Author

ಕೊಡಗು: ಡಿ.22ರಿಂದ ಕರ್ನಾಟಕ ರಾಜ್ಯ ಕ್ರಷರ್ ಮತ್ತು ಕಲ್ಲುಕೋಟೆ ಮಾಲೀಕರ ಅಷೋಶಿಯನ್ ಯಾವುದೇ ಮುನ್ಸೂಚನೆ ನೀಡದೆ ಧೀಡಿರ್ ಆಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ಧಿಷ್ಟವಧಿ ನಡೆಸುತ್ತಿರುವ ಮುಷ್ಕರದಿಂದ ಕೊಡಗು ಜಿಲ್ಲಾ ಮಾಲೀಕರು ಹಾಗೂ ಚಾಲಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಸರಿಸುಮಾರು 1500ಕ್ಕಿಂತ ಅಧಿಕ ಲಾರಿಗಳನ್ನು ಅವಲಂಬಿಸಿರುವ ಚಾಲಕರು ಮತ್ತು ಮಾಲೀಕರು ಜೀವನವನ್ನು ನಡೆಸುತ್ತಿದೆ. ದಿನಾಂಕ: 22/12/2022 ರಂದು ಕ್ರಷರ್ ಅಲೋಶಿಯನ್ ನಡೆಸುತ್ತಿರದ ಮುಷ್ಕರದಿಂದ ಸುಮಾರು 1500 ಲಾರಿ ಮಾಲೀಕ ಕುಟುಂಬ 3,000 ಕ್ಕಿಂತ ಅಧಿಕ ಚಾಲಕರ ಕುಟುಂಬ, 5000 ದಷ್ಷು ಕೂಲಿ ಕಾರ್ಮಿಕರ ಕುಟುಂಬ ಬೀದಿ ಪಾಲಾಗಿದೆ.

ಕೇವಲ ಕಟ್ಟದ ಸಾಮಾಗ್ರಿ ಸಾಗಣಿಕೆ ವಲಯವನ್ನು ನಂಬಿ ಬದುಕುತ್ತಿರುವ ಸುಮಾರು 6000 ಮುಂದಿಯ ಕುಟುಂಬ ಈ ಸಮಸ್ಯೆಯಿಂದ ಕಂಗಾಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಥವಾ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಕೂಡಲೇ ಕ್ರಷರ್ ಮಾಲೀಕರನ್ನು ಕರೆಸಿ ಈ ವಿಷಯವನ್ನು ಇತ್ಯರ್ಥಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ದಿನಾಂಕ 30/12/2022 ಶುಕ್ತವಾದದೊಳಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನವನ್ನು ತೆಗೆದುಕೊಳ್ಳದಿದ್ದರೆ ಅಥವಾ ಕಟ್ಟದ ಸಾಮಾಗ್ರಿಗಳಿಗೆ ಬದಲಿ ವ್ಯವಸ್ಥೆಯನ್ನು ಕಲ್ಪಸಿ ಕೊಡದಿದ್ದ ಪಕ್ಷದಲ್ಲಿ ಶನಿವಾರ, ಮಡಿಕೇರಿ ನಗರದಲ್ಲಿ ಬೃಹತ್‌ ಜಾಥಾದೊಂದಿಗೆ ಹಲವು ಸಂಘಸಂಸ್ಥೆಗಳ ಜೊತೆಗೂಡಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಮತ್ತು ಆಹೋರಾತ್ರಿ ಧರಣಿ ನಡೆಸುವುದಾಗಿ ಅಧ್ಯಕ್ಷ ಮಸೂದ್ ಮಹಮ್ಮದ್, ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿ.ಜಿ.ಮೋಹನ್, ಸದಸ್ಯ ಕೆಂಚಪ್ಪ, ಖಜಾಂಚಿ ಆರ್.ಮಂಜು, ಸಂಘಟನಾ ಕಾರ್ಯದರ್ಶಿ ಎಂ.ಎ.ಸುಜು, ಕಾನೂನು ಮತ್ತು ಹೋರಾಟ ಸಮಿತಿ ಅಧ್ಯಕ್ಷ ಬೋಪಣ್ಣ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು