News Karnataka Kannada
Friday, May 03 2024
ಮಡಿಕೇರಿ

ಸೋಮವಾರಪೇಟೆಯಲ್ಲಿ ಬೃಹತ್ ಬಿಜೆಪಿ ಯುವ ಮೋರ್ಚಾದ ಯುವ ಶಕ್ತಿ ಸಂಗಮ ಕಾರ್ಯಕ್ರಮ

Bjp Yuva Morcha's Yuva Shakti Sangama programme in Somwarpet
Photo Credit : News Kannada

ಸೋಮವಾರಪೇಟೆ: ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಯುವಶಕ್ತಿ ಸಂಗಮ ಕಾರ್ಯಕ್ರಮ ಸೋಮವಾರಪೇಟೆಯಲ್ಲಿ ಜರುಗಿತು.

ಬೆಳಿಗ್ಗೆ ಯುವಶಕ್ತಿಯ ಕಾರ್ಯಕರ್ತರು ಬೃಹತ್ ಬೈಕ್ ಜಾತ ನಡೆಸಿದರು. ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಕೆ.ಜಿ ಬೋಪಯ್ಯ,ಕೊಡಗಿನ ಜನ ರಾಷ್ಟ್ರ ಪ್ರೇಮಕ್ಕೆ ಹೆಸರಾದವರು ಯುವಶಕ್ತಿಯೂ ಬಿಜೆಪಿ ಬೆಂಬಲಕ್ಕೆ ಇಂದು ನಿಂತಿದೆ,ಇದೀಗ ಭಾರತವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವ ಸಂಕಲ್ಪ ತೊಡಬೇಕಾಗಿದೆ ಮತ್ತೆ ಭ್ರಷ್ಟಾಚಾರ ಭಾರತಕ್ಕೆ ಕಾಲಿಡದಂತೆ ಗಮನಹರಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಶಾಸಕ ಅಪ್ಪಚ್ಚು ರಂಜನ್ ಅವರು ಅನೇಕ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಸರಕಾರದಿಂದ ಅಗತ್ಯ ಅನುದಾನ ತರುವಲ್ಲಿ ಸಫಲರಾಗಿದ್ದಾರೆ. ಮಡಿಕೇರಿ ಕ್ಷೇತ್ರದ ಸರ್ವಾಂಗಿನ ಪ್ರಗತಿಗೆ ಇವರು ಕಾರಣರಾಗಿದ್ದಾರೆ ಎಂದರು.

ಶಾಸಕ ರಂಜನ್ ರವರು ಸಮಾವೇಶದಲ್ಲಿ ಮಾತನಾಡಿ, ಯಾವುದೇ ಸರ್ಕಾರವು ನೀಡದಂತ ಕೊಡುಗೆಗಳನ್ನು ಬಿಜೆಪಿ ನೀಡಿದೆ. ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಬ್ಯಾಂಕಿಗಾಗಿ ಮಾತ್ರ ಹಿಂದುಳಿದ ಸಮುದಾಯಗಳನ್ನು ಬಳಕೆ ಮಾಡುತ್ತಿತ್ತು, ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಸಮುದಾಯಗಳ ಸಮಸ್ಯೆ ಗಮನಿಸಿ ಸಂಕಷ್ಟ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಒ oದಾಗಿದೆ ಎಂದರು.

ಕಾಲೋನಿಗಳನ್ನು ಕಾಂಕ್ರೀಟ್ ರಸ್ತೆಗಳನ್ನು ಬಿಜೆಪಿ ಮಾಡಿಕೊಟ್ಟಿದೆ ಎಸ್ಸಿ ಎಸ್ಟಿ ಜನಾಂಗಗಳಿಗೆ ಸೂಕ್ತ ಸವಲತ್ತು ನೀಡಿದ್ದೇವೆ ಎಂದು ಶಾಸಕರು ಹೇಳಿದರು. 25 ವರ್ಷಗಳಿಂದ ರಂಜನ್ ಏನು ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಕೇಳುತ್ತಿದ್ದಾರೆ, ಚಿಕ್ಕ ಆಳುವಾರದಲ್ಲಿ ವಿಶ್ವವಿದ್ಯಾಲಯ ಮಾಡಿದ್ದೇವೆ ಕುಶಾಲನಗರದಲ್ಲಿ ಇಂಜಿನಿಯರಿಂಗ್ ಕಾಲೇಜ್, ಮಡಿಕೇರಿಯ ವೈದ್ಯಕೀಯ ಕಾಲೇಜ್, ಕೂಡಿಗೆ ಸೈನಿಕ ಶಾಲೆ ಇವೆಲ್ಲ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ ಇದೆಲ್ಲ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಅಲ್ಲವೇ ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದರು.ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸುಸಕ್ಷಿತ ಸಮಾಜಕ್ಕೆ ಬಿಜೆಪಿ ಅಮೂಲ್ಯ ಕೊಡುಗೆ ನೀಡುತ್ತಿದೆ ರಂಜನ್ ಅವರು ಹೇಳಿದರು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾಕ್ಟರ್ ಸಂದೀಪ್ ಅವರು ಮಾತನಾಡಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ದೇಶದಲ್ಲಿ ಅತ್ಯಂತ ಸಕ್ರಿಯವಾಗಿ ಜನರ ನೆರವಿಗೆ ಧಾವಿಸಿದ ಕೀರ್ತಿ ಬಿಜೆಪಿ ಯುವ ಮೋರ್ಚಾದಾಗಿದೆ. ಯುವಕರಲ್ಲಿ ರಾಷ್ಟ್ರ ನಿರ್ಮಾಣ ದೇಶಭಕ್ತಿಯ ಚಿಂತನೆ ನೀಡುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ, ಯುವ ಪೀಳಿಗೆಯಲ್ಲಿ ಭಾರತದ ಐಕ್ಯತೆಯ ನಿಟ್ಟಿನಲ್ಲಿ ಬಹಳ ದೊಡ್ಡ ಜವಾಬ್ದಾರಿ ಇದೆ ಎಂದರು.

ಆರೋಗ್ಯ ಶಿಕ್ಷಣ ರಸ್ತೆ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಬಿಜೆಪಿ ನೀಡಿದಷ್ಟು ಯೋಜನೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳಿಗೂ ಸಾಲ ಸೌಲಭ್ಯದ ಮೂಲಕ ಬಿಜೆಪಿ ನೆರವಾಗಿದೆ, ಸಂಪರ್ಕದಲ್ಲಿಯು ಬಿಜೆಪಿಯಿಂದ ಎಂದೂ ಕಾಣದ ಪ್ರಗತಿಯಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಭೂಪಯ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಎಂ ಎಲ್ಸಿ ಸುಜಕುಶಲಪ್ಪ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಜಿ ಮೇದಪ್ಪ, ಪಕ್ಷದ ಪ್ರಮುಖರಾದ ವಿ. ಕೆ ಲೋಕೇಶ್ ಭಾರತೀಶ್, ರವಿ ಕಾಳಪ್ಪ ಸೇರಿದಂತೆ ಬಿಜೆಪಿ ಮತ್ತು ಯುವ ಮೋರ್ಚದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು