ಅತ್ತೂರು: ಇಂದು ಅತ್ತೂರುವಿನಲ್ಲಿ ಮಹಿಳೆ ಒಬ್ಬರು ಗರಗಸ ಮಂಡಲ ಹಾವು ಕಡಿದು ಮೃತಪಟ್ಟಿದ್ದಾರೆ. ಗುಡುಗು ಸಹಿತ ಬೇಸಿಗೆ ಕಾಲದಲ್ಲಿ ಬೀಳುವ ಮಳೆ ಸಂದರ್ಭ ಈ ಹಾವುಗಳು ಮನೆಯೊಳಗೇ ಆಶ್ರಯ ಪಡೆಯುವ ಸಾಧ್ಯತೆ ಹೆಚ್ಚು.
ಹಗಲು ಈ ಹಾವಿಗೆ ಕಣ್ಣು ಕಾಣುವುದಿಲ್ಲ. ಗರಗಸ ಮಂಡಲ (Saw scaled Viper, Carpet Viper) ಎಂಬ ಹಾವು ವಿಷಪೂರಿತ ಮಂಡಲ ಹಾವುಗಳ ಗುಂಪಿಗೆ ಸೇರಿದ ಸರೀಸೃಪ. ಇವುಗಳು ಸಾಮಾನ್ಯವಾಗಿ ಆಫ್ರಿಕಾ, ಮಧ್ಯ ಏಷ್ಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ.
ಇವುಗಳು ತಮ್ಮ ದೇಹವನ್ನು ಉಜ್ಜಿಕೊಳ್ಳುವುದರ ಮೂಲಕ ಶತ್ರುಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಇದರ ವೈಜ್ಞಾನಿಕ ಹೆಸರು “ಇಚಿಸ್” (Echis). ಈ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ. ಲ್ಯಾಟಿನ್ ಭಾಷೆಯಲ್ಲಿ ಇಚಿಸ್ ಎಂದರೆ ಮಂಡಲ ಹಾವು ಎಂದು ಅರ್ಥ. ಸಾಮಾನ್ಯವಾಗಿ ಇದನ್ನು ಗರಗಸ ಮಂಡಲ ಎಂದು ಕರೆಯುತ್ತಾರೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಗೂ ಭಾರತದಲ್ಲಿ ೪ನೇ ಸ್ಥಾನಿಯಾಗಿ ಹಾವು ಹಾವುಕಡಿತಗಳಿಗೆ ಕಾರಣವಾಗಿದೆ.
ಇವು ಹಿಮೋಟಾಕ್ಸಿನ್ ಎಂಬ ವಿಷವನ್ನು ಹೊಂದಿರುತ್ತದೆ. ಈ ಹಾವುಗಳ ವಿಷವು ಕೆಂಪು ರಕ್ತಕಣಗಳಿಗೆ ನೇರವಾದ ಹಾನಿಯನ್ನು ಉಂಟುವಾಡುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವುದರ ಮೂಲಕ ಶತ್ರುಗಳನ್ನು ಕೊಲ್ಲುತ್ತವೆ. ಮನುಷ್ಯರಲ್ಲಿ ಹಾವು ಕಚ್ಚಿದ ೪೦ ನಿಮಿಷಗಳಲ್ಲಿ ಪರಿಣಾಮಗಳು ಕಾಣಿಸುತ್ತವೆ. ತಕ್ಷಣದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುತ್ತದೆ.