ಮಂಗಳೂರು: ಯೇನೆಪೋಯ ವಿಶ್ವವಿದ್ಯಾಲಯವು ಮಂಗಳೂರಿನಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಪ್ರಸಿದ್ಧ ಶಾಲೆಯಾದ ಸಾನಿಧ್ಯ ಸ್ಕೂಲ್ ಫಾರ್ ದ ಮೆಂಟಲ್ ಚಾಲೆಂಜ್ಡ್ ನೊಂದಿಗೆ ತಿಳುವಳಿಕಾ ಒಡಂಬಡಿಕೆ ಮಾಡಿಕೊಂಡಿದೆ. ಯೆನೆಪೋಯ ವಿಶ್ವವಿದ್ಯಾಲಯದ ವಿಶೇಷ ಶಿಕ್ಷಣ ವಿದ್ಯಾರ್ಥಿಗಳಿಗೆ ಸನಿಧ್ಯ ಶಾಲೆಯಲ್ಲಿ ಪ್ರಾಯೋಗಿಕ ತರಬೇತಿ ನೀಡುವ ಗುರಿಯನ್ನು ಈ ತಿಳಿವಳಿಕೆ ಒಪ್ಪಂದ ಹೊಂದಿದೆ.
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಸಾನಿಧ್ಯ ಶಾಲೆಯೊಂದಿಗೆ ಸಹಕರಿಸಿ ವಿಶೇಷ ಶಿಕ್ಷಣದಲ್ಲಿ ತಮ್ಮ ಕೋರ್ಸ್ ಗಳಿಗೆ ಪ್ರಾಯೋಗಿಕ ತರಬೇತಿ ನೀಡಲಿದೆ.
ಈ ಸಹಭಾಗಿತ್ವವು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ವಿಶೇಷ ಅಗತ್ಯವಿರುವ ಮಕ್ಕಳೊಂದಿಗೆ ಕೆಲಸ ಮಾಡುವಲ್ಲಿ ಸಂಸ್ಥೆಯ ಬದ್ಧತೆಯ ಧ್ಯೋತಕವಾಗಿದೆ.
ಪ್ರಾಯೋಗಿಕ ತರಬೇತಿ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ವಿಶೇಷ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಂಟಿ ಸಮ್ಮೇಳನಗಳು, ಸೆಮಿನಾರ್ ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆಗಳನ್ನು ಸಹ ಈ ತಿಳಿವಳಿಕೆ ಒಪ್ಪಂದ ಒಳಗೊಂಡಿದೆ. ಈ ಕಾರ್ಯಕ್ರಮಗಳು ಎರಡೂ ಸಂಸ್ಥೆಗಳ ತಜ್ಞರು ವಿಚಾರಗಳನ್ನು ವಿನಿಮಯ ಮಾಡಿಕೊಿಳ್ಳಲು ಅವಕಾಶ ನೀಡುತ್ತದೆ.