News Karnataka Kannada
Tuesday, April 30 2024
ಮಡಿಕೇರಿ

ಮಡಿಕೇರಿ: ಡಿ.13ಕ್ಕೆ ಓಜಸ್ವಿ ಫೌಂಡೇಶನ್ ತಾಲೂಕು ಮಟ್ಟದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Madikeri: Ojasvi Foundation taluk-level career guidance programme to be held on Dec.13
Photo Credit : By Author

ಮಡಿಕೇರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ ಸಲುವಾಗಿ ಓಜಸ್ವಿ ಫೌಂಡೇಶನ್ನಿನ ಮೂಲಕ ಓಜಸ್ವಿ ಸ್ಪೂರ್ತಿ ಎಂಬ ವೃತ್ತಿಮಾರ್ಗದರ್ಶನ ಕಾರ್ಯಕ್ರಮವನ್ನು ವಿರಾಜಪೇಟೆ ತಾಲೂಕು ಸರ್ಕಾರಿ ಶಾಲೆಯ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮ ಡಿಸೆಂಬರ್ 13 ರಂದು ಗೋಣಿಕೊಪ್ಪಲುವಿನ ಲಯನ್ಸ್ ಶಾಲಾ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 3.30 ರವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ, ಅಂತಾರಾಷ್ಟ್ರೀಯ ಲೈಫ್ ಸ್ಕಿಲ್ ಕೋಚ್ ಆರ್.ಎ. ಚೇತನ್ ರಾಮ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೂರ್ಗ್ ಎಜುಕೇಷನ್ ಫಂಡ್‌ನ ಅಧ್ಯಕ್ಷ ಸುಭಾಷ್ ಮುತ್ತಣ್ಣ, ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಚಿಣ್ಣಪ್ಪ, ವಿರಾಜಪೇಟೆ ಬಿಇಒ ಶ್ರೀಶೈಲ ಬಿಳಗಿ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಎಸ್‌ಎಸ್‌ಎಲ್‌ಸಿ ನೋಡಲ್ ಆಫೀಸರ್ ಅಯ್ಯಪ್ಪ ಪಿ.ಆರ್. ಹಾಗೂ ಲಯನ್ಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಡಿ. ತಂಗಮ್ಮ ಪಾಲ್ಗೊಳ್ಳಲಿದ್ದಾರೆ.

ಓಜಸ್ವಿ ಫೌಂಡೇಶನ್ ಸಂಸ್ಥಾಪಕಿ ಡಾ.ಕವಿತಾ ಪಿ.ಸಿ., ಓಜಸ್ವಿ ಟ್ರಸ್ಟಿ ವಿಜಿತ ಯು.ಜಿ. ಹಾಗೂ ಟ್ರಸ್ಟ್ ಸದಸ್ಯ ಬ್ರಿಜೇಶ್ ಸಿ.ಎ. ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಆರ್.ಎ. ಚೇತನ್ ರಾಮ್ ಅವರು “ಪ್ರೇರಣೆ ಹಾಗೂ ವೃತ್ತಿಮಾರ್ಗದರ್ಶನ” ಕುರಿತು ಮಾಹಿತಿ ನೀಡಲಿದ್ದಾರೆ. ಧ್ಯಾನ ಅಭ್ಯಾಸ ಕುರಿತ ಅರಿವನ್ನು ಹಾಸನದ ಪಿರಮಿಡ್ ಸೊಸೈಟಿ ಮೂವ್ಮೆಂಟ್‌ನ ಷಡಕ್ಷರಿ ಸಿ.ಎಸ್. ನೀಡಲಿದ್ದಾರೆ. ಕೌಶಲ್ಯ ಕರ್ನಾಟಕ ಯೋಜನೆ ಕುರಿತ ಅರಿವು, ಕೋರ್ಸ್ ಮತ್ತು ಜಾಗೃತಿ ಹಾಗೂ ಅವಕಾಶಗಳ ಬಗ್ಗೆ ಬೆಂಗಳೂರಿನ ಸಂಕಲ್ಪ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಸಹಕಾರದ ಮುಖ್ಯಸ್ಥ ಸತೀಶ್ ಬಿ. ಕೆ. ಮಾಹಿತಿ ನೀಡುವರು.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಬಿಸಿಡಬ್ಲುö್ಯಡಿ ಹೆಚ್.ಸಿ. ನಾಗರಾಜು, ಪೊನ್ನಂಪೇಟೆ ತಾಲೂಕು ಬುಡಕಟ್ಟು ಕ್ಷೇಮಾಭಿವೃದ್ಧಿ ಅಧಿಕಾರಿ ಗುರುಶಾಂತಪ್ಪ ಹಾಗೂ ಪೊನ್ನಂಪೇಟೆಯ ಎಸ್‌ಡಬ್ಲ್ಯುಒ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ ಮಾಹಿತಿಯನ್ನು ನೀಡಲಿದ್ದಾರೆ ಎಂದು ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಕವಿತಾ ಪಿ. ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು