News Karnataka Kannada
Monday, May 06 2024
ಮಡಿಕೇರಿ

ರಷ್ಯಾ-ಉಕ್ರೇನ್‌ ಯುದ್ದ :15,600 ರೂ.ಗೆ ಕುಸಿದ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ

Coffee
Photo Credit : News Kannada

ಮಡಿಕೇರಿ : ಉಕ್ರೇನ್‌ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದದ ಕಾರಣದಿಂದಾಗಿ ಅಡುಗೆ ಎಣ್ಣೆಯ ಮತ್ತು ಕಚ್ಚಾ ತೈಲದ ದರ ಏರುಮುಖವಾಗಿದೆ. ಅಡುಗೆ ಎಣ್ಣೆ ದರ ವಾರದ ಹಿಂದೆ ಲೀಟರಿಗೆ 135-140 ರೂಪಾಯಿ ಇದ್ದುದ್ದು ಈಗ 175-180 ರೂಪಾಯಿಗಳಿಗೆ ಏರಿಕೆ ಆಗಿದೆ. ಆದರೆ ಜಿಲ್ಲೆಯ ಜನತೆಯ ಜೀವನಾಡಿ ಆಗಿರುವ ಕಾಫಿ ದರ ಕುಸಿತ ದಾಖಲಿಸುತ್ತಿದೆ.

ಕೊಡಗು ಹಾಗೂ ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಗಳಲ್ಲಿ ಶನಿವಾರ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ 50 ಕೆಜಿಯ ಚೀಲವೊಂದಕ್ಕೆ 15,600 ರೂಪಾಯಿಗಳಿಗೆ ಇಳಿಕೆ ಆಗಿದೆ. ಕೇವಲ ವಾರದ ಹಿಂದೆ 50 ಕೆಜಿಗೆ 16,100-200 ರೂಪಾಯಿಗೆ ಮಾರಾಟವಾಗಿ ಬೆಳೆಗಅರರಿಗೆ ಸಂತಸ ನೀಡಿದ್ದ  ಕಾಫಿಯ ದರ ಕುಸಿತ ಬೆಳೆಗಾರರಲ್ಲಿ  ಆತಂಕ ಸೃಷ್ಟಿಸಿದೆ.   ವಿಶ್ವದಲ್ಲಿ ಅತ್ಯಂತ ದೊಡ್ಡ ಅರೇಬಿಕಾ ಕಾಪಿ ಬೆಳೆಗಾರ ದೇಶವಾಗಿರುವ ಬ್ರೆಜಿಲ್‌ ನಲ್ಲಿ  ಹಿಮಪಾತದಿಂದಾಗಿ  ಅಂತರ್ರಾಷ್ಟ್ರೀಯ ಕಾಫಿ ಮಾರುಕಟ್ಟೆಗೆ ಅರೇಬಿಕಾ ಕಾಫಿಯ ಸರಬರಾಜು ಕಡಿಮೆ ಆದ ಕಾರಣಕ್ಕಾಗಿಯೇ ಅರೇಬಿಕಾ ಕಾಪಿಯ ದರ  ಮೂರು ತಿಂಗಳ ಹಿಂದೆ 12 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಇದ್ದುದು ನಂತರ  16,200 ರ ವರೆಗೂ ಜಿಗಿದಿತ್ತು. ಅರೇಬಿಕಾ ಜತೆಗೇ ಅರೇಬಿಕಾ ಚೆರಿ, ರೋಬಸ್ಟಾ ಚೆರಿ ಮತ್ತು ಪಾರ್ಚ್‌ ಮೆಂಟ್‌ ಕಾಪಿಯ ದರವೂ  ಚೀಲವೊಂದಕ್ಕೆ 200 ರಿಂದ 400 ರೂಪಾಯಿಗಳಷ್ಟು ದರ ಇಳಿಕೆ ದಾಖಲಿಸಿವೆ. ಸಂಕಷ್ಟದಲ್ಲಿರುವ ಕಾಪಿ ಬೆಳೆಗಾರರಿಗೆ  ದರ ಕುಸಿತ ಮತ್ತೆ ಚಿಂತೆಗೆ ಕಾರಣವಾಗಿದೆ.

ದರ ಕುಸಿತಕ್ಕೆ ಉಕ್ರೇನ್‌ -ರಷ್ಯಾದ ಯುದ್ದವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ ,ಉಕ್ರೇನ್‌ ಎರಡೂ ದೇಶಗಳೂ ಭಾರತದ ಕಾಫಿಯ ಆಮದುದಾರ ರಾಷ್ಟ್ರಗಳೇ ಆಗಿವೆ. ಕಾಪಿ ಮಂಡಳಿಯ ಮೂಲಗಳ ಪ್ರಕಾರ ಕಳೆದ 2021  ಏಪ್ರಿಲ್‌ ನಿಂದ ಜನವರಿ 31 ರ ವರೆಗೆ ಭಾರತವು  6,604 ಮೆಟ್ರಿಕ್ ಟನ್
ಹಸಿರು ಬೀನ್,  ಇನ್‌ ಸ್ಟಂಟ್‌ ಮತ್ತು ಹುರಿದ   ಕಾಫಿಯನ್ನು ಉಕ್ರೇನ್‌ಗೆ ಮತ್ತು 23,519 ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಷ್ಯಾ ಕ್ಕೆ ರಫ್ತು ಮಾಡಲಾಗಿದೆ.
2018-19 ರ ಆರ್ಥಿಕ ವರ್ಷದಲ್ಲಿ ಉಕ್ರೇನ್‌ ಗೆ ಒಟ್ಟು  7,327 ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಫ್ತು ಮಾಡಲಾಗಿತ್ತು.  ಮತ್ತು 2019-20 ರಲ್ಲಿ ಇದು 6,947
ಮೆಟ್ರಿಕ್ ಟನ್‌ಗಳಷ್ಟಿತ್ತು .

ಸಿಐಎಸ್‌ (Commonwealth of Independent states) ಒಕ್ಕೂಟದ 11  ದೇಶಗಳು ಭಾರತದಿಂದ ಕಾಫಿಯನ್ನು ಆಮದು ಮಾಡಿಕೊಳ್ಳುವ ಸಾಂಪ್ರದಾಯಿಕ ದೇಶಗಳಾಗಿವೆ. ಈ ಸಿಐಎಸ್‌ ಒಕ್ಕೂಟವನ್ನು 1991 ರಲ್ಲಿ ರಚನೆ ಮಾಡಲಾಗಿದ್ದು ಇದರಲ್ಲಿ  ಅರ್ಮೇನಿಯ, ಬೆಲಾರಸ್‌ ,
ಕಝಕಿಸ್ಥಾನ, ಕಿರ್ಗಿಸ್ಥಾನ, ಮೊಲ್ಡಾವಿಯ, ಉಜ್ಬೇಕಿಸ್ಥಾನ್‌ ,ತಜಕಿಸ್ಥಾನ್‌ , ರಷ್ಯಾ ತುರ್ಕಮೆನಿಸ್ಥಾನ್‌ ಮತ್ತು ಉಕ್ರ್ಯೇನ್‌ ಇವೆ. . ಕಾಫಿ ಬೋರ್ಡ್ ಹಂಚಿಕೊಂಡ ಮಾಹಿತಿಯ ಪ್ರಕಾರ,  ಈ ದೇಶಗಳಿಗೆ ಭಾರತದಿಂದ ರಫ್ತಾಗುವ ಕಾಫಿಯಲ್ಲಿ  ರಷ್ಯಾ ಶೇಕಡಾ 75 ರಷ್ಟು ಪಾಲನ್ನು ಹೊಂದಿದ್ದು   ಉಕ್ರೇನ್  20% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಮಾರುಕಟ್ಟೆ ತಜ್ಞರ ಪ್ರಕಾರ ರಷ್ಯಾ ಉಕ್ರೇನ್‌ ಯುದ್ದದಿಂದಾಗಿ ಸಿಐಎಸ್‌ ದೇಶಗಳಿಗೆ ಕಾಫಿಯ ರಫ್ತು ಸ್ಥಗಿತಗೊಂಡಿರುವುದು ದರ ಕುಸಿತಕ್ಕೆ ನೇರ ಕಾರಣವಲ್ಲ. ಯೂರೋಪಿಯನ್‌ ರಾಷ್ಟ್ರಗಳಲ್ಲಿ ಯುದ್ದದ ಭೀತಿ ಮತ್ತು ಅನಿಶ್ಚಿತತೆಯೇ ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಏಎಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ದವು ಸದ್ಯಕ್ಕೆ ನಿಲ್ಲುವ ಲಕ್ಷಣಗಳೇನೂ ಕಾಣುತ್ತಿಲ್ಲ ಬದಲಿಗೆ ತೀವ್ರವಾಗುತ್ತ ನಡೆದಿದೆ. ಯುದ್ದವು ಮುಂದುವರಿದಲ್ಲಿ ಅಡುಗೆ ಎಣ್ಣೆ ದರ ಇನ್ನೂ ಗಗನಮುಖಿ ಆಗಲಿದೆ ಎನ್ನಲಾಗಿದೆ. ಉಕ್ರೇನ್‌ ಎಣ್ಣೆ ಕಾಳುಗಳ  ಅತಿ ದೊಡ್ಡ ಉತ್ಪಾದಕ ದೇಶವಾಗಿರುವುದೇ ಇದಕ್ಕೆ ಕಾರಣ. ಅದರೆ ಕಾಫಿಯ ದರವೂ ಗಣನೀಯವಾಗಿ ಕುಸಿತ ಕಾಣಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು