News Karnataka Kannada
Sunday, May 05 2024
ಮಡಿಕೇರಿ

ಮೃತದೇಹಗಳನ್ನು ಪ್ಯಾಕ್ ಮಾಡುವ ರಾಬಟ್೯, ಹುಸೇನ್ ರಿಗೆ ವಿರಾಜಪೇಟೆ ರೋಟರಿಯಿಂದ ನೆರವು

Rotary
Photo Credit :

ಮಡಿಕೇರಿ ; ಕೋವಿಡ್ ನಿಂದ ಸಾವನ್ನಪ್ಪಿದವರ ಮೖತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಸಿದ್ದಗೊಳಿಸುವ ಕಾಯಕದಲ್ಲಿ 17 ತಿಂಗಳಿನಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ರಾಬಟ್೯ ರಾಡ್ರಿಗಸ್, ಸಯ್ಯದ್ ಹುಸೇನ್ ಅವರುಗಳಿಗೆ ವಿರಾಜಪೇಟೆ ರೋಟರಿ ಕ್ಲಬ್ ನಿಂದ ಗ್ರಹೋಪಯೋಗಿ ಪರಿಕರಗಳ ಕೊಡುಗೆ ನೀಡಿ ಸತ್ಕರಿಸಲಾಯಿತು.
ರಾಬಟ್೯, ಹುಸೇನ್ ಅವರು ಕಳೆದ 17 ತಿಂಗಳಿನಿಂದ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 328 ಮಂದಿಯ ಮೖತದೇಹಗಳನ್ನು ಸಂಸ್ಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡುವ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಅಪರೂಪದ ಕಾಯ೯ದಲ್ಲಿ ನಿರತರಾಗಿರುವ ರಾಬಟ್೯, ಹುಸೇನ್ ಅವರ ನಿರಂತರ ಕಾಯಕವನ್ನು ಗಮನಿಸಿ ವಿರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿದ ಸರಳ ಕಾಯ೯ಕ್ರಮದಲ್ಲಿ ಇಬ್ಬರೂ ಕಾಯಕಜೀವಿಗಳಿಗೆ ಗ್ರಹೋಪಯೋಗಿ ಪರಿಕರಗಳನ್ನು ನೀಡಿ ಸತ್ಕರಿಸಲಾಯಿತು.
ಈ ಸಂದಭ೯ ಮಾತನಾಡಿದ ರೋಟರಿ ವಲಯ 6 ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಕೋವಿಡ್ ಸಂಕಷ್ಟ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಜನಸೇವೆಯ ಮೂಲಕ ದೇವರೂ ಮೆಚ್ಚುವಂಥ ಕಾಯ೯ ನಿವ೯ಹಿಸಿದ್ದಾರೆ. ಅದರಲ್ಲಿಯೂ ಮೖತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡುವ ಅಪರೂಪದ ಕಾಯಕದಲ್ಲಿ ರಾಬಟ್೯ ಮತ್ತು ಹುಸೇನ್ ಹಗಲೂ ರಾತ್ರಿಯೆನ್ನದೇ ವಿರಾಮವೂ ಇಲ್ಲದೇ ತೊಡಗಿಸಿಕೊಂಡಿದ್ದರು. ಬಹಳ ಅಪರೂಪದ ಸೇವಾ ಕಾಯ೯ದ ಮೂಲಕ ಇವರೀವ೯ರು ಜಾತಿ,ಧಮ೯ ಮೀರಿ ತಮ್ಮ ಕತ೯ವ್ಯ ನಿವ೯ಹಿಸಿದ್ದಾರೆ ಎಂದು ಶ್ಲಾಘಿಸಿದರು. ಮೖತರ ಕುಟುಂಬ ವಗ೯ ಇವರಿಗೆ ಕೖತಜ್ಞತೆಯನ್ನು ಕೂಡ ಹೇಳಲಾಗದ ವಿಚಿತ್ಕ ಪರಿಸ್ಥಿತಿಯಲ್ಲಿ ಯಾವುದೇ ಅಪೇಕ್ಷೆ ಇಲ್ಲದೇ ರಾಬಟ್೯, ಹುಸೇನ್ ತಮ್ಮ ಪಾಡಿಗೆ ತಾವು ಮೖತದೇಹಗಳನ್ನು ಸಂಸ್ಕಾರಕ್ಕೆ ಪ್ಯಾಕ್ ಮಾಡುತ್ತಾ ಅದನ್ನೇ ದೇವರು ಮೆಚ್ಚುವ ಕಾಯ೯ದಂತೆ ಕತ೯ ವ್ಯ ಪ್ರಜ್ಞೆ ತೋರಿದ್ದಾರೆ. ಇಂಥವರು ಅಪರೂಪ ಮತ್ತು ನಾಗರಿಕ ಸಮಾಜದ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಜಪೇಟೆ ರೋಟರಿ ಕ್ಲಬ್ ಇವರನ್ನು ಗುರುತಿಸಿ ಸೂಕ್ತ ನೆರವು ನೀಡಿರುವುದು ಸಾಮಾಜಿಕ ಸೇವಾ ಸಂಸ್ಥೆಯ ಕಾಳಜಿಗೆ ನಿದಶ೯ನ ಎಂದೂ ಅನಿಲ್ ಶ್ಲಾಘಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು