News Karnataka Kannada
Thursday, May 02 2024
ಮಡಿಕೇರಿ

ಕೋವಿಡ್‌ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

Alcohol
Photo Credit : News Kannada

ಮಡಿಕೇರಿ ಏ. 14 : ಕೋವಿಡ್‌ ಸಂಕಷ್ಟದಿಂದ ಜಿಲ್ಲೆಯಲ್ಲಿ ಕಳೆದ ವರ್ಷ ಲಾಕ್‌ ಡೌನ್‌ ಘೋಷಿಸಲಾಗಿತ್ತು. ಬಹುತೇಕ ವ್ಯಾಪಾರ ವಹಿವಾಟು ಕುಂಠಿತಗೊಂಡಿತ್ತು. ಪ್ರವಾಸಿಗರ ಆಗಮನವಿಲ್ಲದೆ ಹೋಟೆಲ್‌ ಗಳೂ, ಹೋಂ ಸ್ಟೇ ಗಳೂ ನಷ್ಟ ಅನುಭವಿಸಿದವು. ಆದರೆ ಅಚ್ಚರಿ ಎಂಬಂತೆ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಏರಿಕೆ ದಾಖಲಾಗಿದೆ.

2021-22 ನೇ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಲ್ಲಿ ಶೇಕಡಾ 10 ರಷ್ಟು ಏರಿಕೆ ಆಗಿದೆ. ಅಬಕಾರಿ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಶೇಕಡಾ 111 ರಷ್ಟು ಗುರಿ ಸಾದಿಸಲಾಗಿದೆ. 2019 -20 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 9,97,041 ಪೆಟ್ಟಿಗೆಗಳಷ್ಟು ಮದ್ಯ  ಮಾರಾಟವಾಗಿದ್ದು  3,54,552 ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟ ವಾಗಿತ್ತು. 2020-21 ನೇ ಹಣಕಾಸು ವರ್ಷದಲ್ಲಿ ಒಟ್ಟು 8,84,780 ಪೆಟ್ಟಿಗೆ ಗಳಷ್ಟು ಮದ್ಯ ಮಾರಾಟವಾಗಿದ್ದು 3,12,789 ಪೆಟ್ಟಿಗೆ ಗಳಷ್ಟು ಬಿಯರ್‌ ಮಾರಾಟ ಆಗಿತ್ತು. ಇದು ಹಿಂದಿನ ಸಾಲಿಗೆ ಹೋಲಿಸಿದರೆ ಶೇಕಡಾ 12 ರಷ್ಟು ಕುಸಿತ ಆಗಿದೆ.

ಆದರೆ ಕಳೆದ ಮಾರ್ಚ್‌ 31 ಕ್ಕೆ ಕೊನೆಗೊಂಡ 2021-22 ನೇ ಹಣಕಾಸು ವರ್ಷದಲ್ಲಿ ಒಟ್ಟು 9,80,262 ಪೆಟ್ಟಿಗೆ ಗಳಷ್ಟು ಮದ್ಯ ಮಾರಾಟವಾಗಿದ್ದು 3,48,526 ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿ ಹಿಂದಿನ ವರ್ಷಕ್ಕಿಂತ ಶೇಕಡಾ 10 ರಷ್ಟು ಏರಿಕೆ ದಾಖಲಾಗಿದೆ. ಜಿಲ್ಲೆಯ ಆರ್ಥಿಕತೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನಬಹುದು.  ಕಳೆದ ಹಣಕಾಸು ವರ್ಷದ ಒಟ್ಟು ಮಾರಾಟದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 2,23,252 ಪೆಟ್ಟಿಗೆ ಮದ್ಯ ಮತ್ತು 95,447 ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿದೆ.

ಇದು ಹಿಂದಿನ ವರ್ಷಕ್ಕಿಂತ 28882 ಪೆಟ್ಟಿಗೆ ಮದ್ಯ ಮತ್ತು 9985  ಪೆಟ್ಟಿಗೆಗಳಷ್ಟು ಬಿಯರ್‌ ಹೆಚ್ಚು ಮಾರಾಟವಾಗಿದೆ. ಅವಿಭಜಿತ ವೀರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು 3,88,308 ಪೆಟ್ಟಿಗೆ ಮದ್ಯ ಹಾಗೂ 1,18,926 ಪೆಟ್ಟಿಗೆ  ಬಿಯರ್‌ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ 31,085ಪೆಟ್ಟಿಗೆ ಮದ್ಯ ಮತ್ತು 10,993 ಪೆಟ್ಟಿಗೆ ಬಿಯರ್‌ ಹೆಚ್ಚಾಗಿ ಮಾರಾಟವಾಗಿದೆ. ಅವಿಭಜಿತ ಸೋಮವಾರಪೇಟೆ ತಾಲ್ಲೂಕಿನಲ್ಲಿ 3,68,702 ಪೆಟ್ಟಿಗೆಗಳಷ್ಟು ಮದ್ಯ ಹಾಗೂ 1,34,156 ಪೆಟ್ಟಿಗೆ ಬಿಯರ್‌ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ 35,515 ಪೆಟ್ಟಿಗೆ ಮದ್ಯ ಮತ್ತು 14,759 ಪೆಟ್ಟಿಗೆ ಬಿಯರ್‌ ಹೆಚ್ಚಾಗಿ ಮಾರಾಟವಾಗಿದೆ.

ಕೊಡಗು ಜಿಲ್ಲೆಯಲ್ಲಿ ವಿವಿಧ ಪರವಾನಗಿ ಹೊಂದಿರುವ ಒಟ್ಟು 231 ಮದ್ಯ ಮಾರಾಟ  ಸ್ಥಳಗಳಿವೆ. ಇದರಲ್ಲಿ 66 ಬಾರ್‌ ಮತ್ತು ರೆಸ್ಟೋರಂಟ್‌ , 87 ವೈನ್‌ ಶಾಪ್‌ ಗಳು, ಎಂಎಸ್‌ಐಎಲ್‌ ನ 10 ಮಾರಾಟ ಮಳಿಗೆಗಳು, 20 ರಿಕ್ರಿಯೇಷನ್‌ ಕ್ಲಬ್‌ ಗಳು , 40 ಮದ್ಯ ಪರವಾನಗಿ ಹೊಂದಿರುವ ವಸತಿ ಸೌಕರ್ಯದ ಹೋಟೆಲ್‌ ಗಳು ಇವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು