News Karnataka Kannada
Thursday, May 02 2024
ಮೈಸೂರು

ಹೃದಯವಂತ ಕನ್ನಡಿಗರ ಬಳಗದಿಂದ ಕನ್ನಡ ಅರಿವು ಅಭಿಯಾನ

Kannada Awareness Campaign by Hridayavantha Kannadigas Balaga
Photo Credit : News Kannada

ಮೈಸೂರು: ಮೈಸೂರಿನಲ್ಲಿ ಕನ್ನಡವನ್ನು ಕಡೆಗಣಿಸಿ ಆಂಗ್ಲಭಾಷೆಯಲ್ಲಿ ವ್ಯವಹರಿಸುತ್ತಿರುವ ಬಗ್ಗೆ ಮೈಸೂರು ಹೃದಯವಂತ ಕನ್ನಡಿಗರ ಬಳಗಕ್ಕೆ ದಿನಪ್ರಂತಿ ಸಾರ್ವಜನಿಕರು ಕರೆ ಮಾಡಿ ದೂರು ನೀಡುತ್ತಿದ್ದಾರೆ.

ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದೇ ಇರುವುದು ನಿಜವಾಗಿಯೂ ಖೇದಕರ. ಈ ನಿಟ್ಟಿನಲ್ಲಿ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಒಂದು ದಿನದ ಮಟ್ಟಿಗೆ ಕನ್ನಡ ಹರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೆ ಸಂದರ್ಭದಲ್ಲಿ ಗೋಕುಲಂ ಕಾಳಿದಾಸ ರಸ್ತೆಯು ಮುಖ್ಯ ರಸ್ತೆಯಲ್ಲಿ ಇರುವ ಓನೇಸ್ತಾ ಎಂಬ ಪೀಜಾ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನೋಡಿದಾಗ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ನಾವು ಸಂಬಂಧಿಸಿದ ಅಂಗಡಿ ಮಾಲೀಕರ ಬಳಿ ಕನ್ನಡದ ಬಗ್ಗೆ ಮಾತನಾಡಿದಾಗ ಅವರಿಗೆ ಕನ್ನಡ ಮೊದಲು ಹಾಕಬೇಕು ಎಂದು ಗೊತ್ತಿಲ್ಲ ಆದ್ದರಿಂದ ತಪ್ಪಾಗಿದೆ. ಇದರ ಬಗ್ಗೆ ನಮಗೆ ಯಾರೂ ಸಹ ಮಾಹಿತಿ ನೀಡಿಲ್ಲ ಆದ್ದರಿಂದ 15-20 ದಿನಗಳಲ್ಲಿ ಆಂಗ್ಲಭಾಷೆಯಲ್ಲಿ ಇರುವ ನಾಮಫಲಕ ತೆರವು ಗೊಳಿಸಿ ಕನ್ನಡ ನಾಮಫಲಕ ಹಾಕುತ್ತೇವೆ ಎಂದು ಒಪ್ಪಿಕೊಂಡರು.

ಆದರೆ ಈ ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಸುಮಾರು 5-6 ವರ್ಷಗಳಿಂದ ಕನ್ನಡ ನಾಮಫಲಕಗಳಿಗೆ ಸಂಬಂಧಿಸಿದ ಹಾಗೆ ಕನ್ನಡ ಸಾಂಸ್ಕೃತಿಕ ಇಲಾಖೆ, ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಸರ್ಕಾರಿ ಕೆಲಸದಲ್ಲಿ ಯಾಕೆ ಮುಂದುವರಿಯಬೇಕು. ಸರ್ಕಾರಿ ಸಂಬಳ ಪಡೆಯಲು ಇವರಿಗೆ ನಾಚಿಕೆ ಆಗಲ್ವೇ ಈ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷರು ಡಿಪಿಕೆ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕನ್ನಡ ಬೋರ್ಡ್‌ ಅಳವಡಿಕೆಗೆ ಅಂಗಡಿ ಮಾಲೀಕರಿಗೆ ಬಳಗದ ವತಿಯಿಂದ ಒಂದು ವಾರಗಳ ಕಾಲ ಗಡುವು ನೀಡಿ ಎಚ್ಚರಿಸಲಾಯಿತು ಇದೆ ಸಂದರ್ಭದಲ್ಲಿ ಬಳಗದ ಸಂಸ್ಥಾಪಕ ಅಧ್ಯಕ್ಷರು ಡಿಪಿಕೆ ಪರಮೇಶ್, ಉಪಾಧ್ಯಕ್ಷ ಪಿ ವಿ ಕುಮಾರ್, ಕಾರ್ಯದರ್ಶಿ ಮನೋಜ್ ಕುಮಾರ್ ,ರವಿ, ಮಹೇಶ್, ಬಸವಣ್ಣ, ನಾಗೇಂದ್ರ, ನಂಜಪ್ಪ, ಚಂದ್ರ ಚಾರಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು