News Karnataka Kannada
Monday, April 29 2024
ಮೈಸೂರು

ಪ್ರಧಾನಿ ಮೋದಿ ಆಗಮನದ ಹಿನ್ನಲೆ, ಮೈಸೂರಲ್ಲಿ ಬಸ್ ಸಂಚಾರದಲ್ಲಿ ಬದಲಾವಣೆ

Untitled 2 Recovered Recovered Recovered Recovered
Photo Credit :

ಮೈಸೂರು: ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ  ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮತ್ತು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಿರುವುದರಿಂದಾಗಿ ವಾಹನ ಸಂಚಾರ ಮಾರ್ಗ ಮತ್ತು ನಿಲುಗಡೆಗೆ  ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳನ್ನು ಪೊಲೀಸರು ಮಾಡಿದ್ದಾರೆ.

ಬಸ್ಸುಗಳ ನಿಲುಗಡೆಗೆ ಗುರುತಿಸಲಾಗಿರುವ ಸ್ಥಳಗಳು ಮತ್ತು ಸ್ಥಳಗಳಿಗೆ ಸಂಚರಿಸುವ ಮಾರ್ಗಗಗಳನ್ನು ನೋಡುವುದಾದರೆ ಜೆ.ಕೆ ಮೈದಾನಲ್ಲಿ ಮಂಡ್ಯ ಕಡೆಯಿಂದ ಬರುವ  ಬಸ್ಸುಗಳಿಗೆ  ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಮೈಸೂರು ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಲಿಂಕ್ ರಸ್ತೆ ಜಂಕ್ಷನ್- ಟಿ.ಎನ್ ನರಸಿಂಹಮೂರ್ತಿ ವೃತ್ತ- ಅಬ್ದುಲ್ ಕಲಂ ಅಜಾದ್ ವೃತ್ತ- ಸುಭಾಷ್ ಚಂದ್ರ ಬೋಸ್ ವೃತ್ತ- ಪುಟ್ಟ ಗೋಪಾಲ ಕೃಷ್ಣ ಶೆಟ್ಟಿ ವೃತ್ತ- ಜೆ.ಕೆ ಮೈದಾನ ಪಾರ್ಕಿಂಗ್‌ಗೆ ತೆರಳ ಬಹುದಾಗಿದೆ.

ಹಾಸನ ಮತ್ತು ಹುಣಸೂರು ಕಡೆಯಿಂದ ಬರುವ ಬಸ್ಸುಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿದೆ ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್- ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್- ವೆಂಕಟರಮಣಯ್ಯ ರಸ್ತೆ- ಬಲತಿರುವು- ಬಯಲು ರಂಗ ಮಂದಿರ ರಸ್ತೆ- ತಿಪ್ಪೇಸ್ವಾಮಿ ವೃತ್ತ ಮೂಲಕ ವಿಲೇಜ್ ಹಾಸ್ಟೆಲ್ ಮೈದಾನ ಪಾರ್ಕಿಂಗ್ ಸ್ಥಳಕ್ಕೆ ತಲುಪಬಹುದಾಗಿದೆ.

ಪಿರಿಯಾಪಟ್ಟಣ, ಕೆ.ಆರ್ ನಗರ ಕಡೆಯಿಂದ ಬರುವ  ಬಸ್ಸುಗಳಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆಯಿದ್ದು, ಇಲ್ಲಿಗೆ   ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್- ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್- ಚದುರಂಗ ಜಂಕ್ಷನ್- ಜೆ.ಸಿ ಕಾಲೇಜು ರಸ್ತೆ- ಮೈಸೂರು ವಿಶ್ವವಿದ್ಯಾನಿಲಯದ ಪಾರ್ಕಿಂಗ್ ಸ್ಥಳ ತಲುಪಬಹುದಾಗಿದೆ.  ಇಲ್ಲಿಗೆ ಕೆ.ಆರ್ ನಗರ ಕಡೆಯಿಂದ ಬರುವ ಬಸ್ಸುಗಳು ಅಂದರೆ ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್- ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್- ವೆಂಕಟರಮಣಯ್ಯ ರಸ್ತೆ- ಬಲತಿರುವು- ಬಯಲು ರಂಗ ಮಂದಿರ ರಸ್ತೆ- ಮೈಸೂರು ವಿ.ವಿ ಸೆನೆಟ್ ಭವನ ಗೇಟ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯ ಪಾರ್ಕಿಂಗ್‌ಗೆ  ತಲುಪಬಹುದಾಗಿದೆ.

ನಂಜನಗೂಡು, ಚಾಮರಾಜನಗರ ಕಡೆಯಿಂದ ಬರುವ ಬಸ್ಸುಗಳಿಗೆ  ಎನ್.ಎಸ್.ಎಸ್ ಕಛೇರಿ ಮೈದಾನ ಮತ್ತು ಸೋಮಾನಿ ಬಿ.ಎಡ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ  ಮೈಸೂರು ನಂಜನಗೂಡು ರಸ್ತೆ- ಡಾ. ಎ.ಪಿ.ಜೆ ಅಬ್ದುಲ್ ಕಲಂ ವೃತ್ತ- ಎಡತಿರುವು- ರಿಂಗ್ ರಸ್ತೆ ಮೂಲಕ- ಕೆ.ಇ.ಬಿ ಜಂಕ್ಷನ್- ಬೋಗಾದಿ ರಿಂಗ್ ರಸ್ತೆ ಜಂಕ್ಷನ್- ಬಲತಿರುವು- ಬೋಗಾದಿ ರಸ್ತೆ- ಶಂಕರ್‌ನಾಗ್ ವೃತ್ತ- ಬಲತಿರುವು- ಬಿಸಿಲು ದೇವಸ್ಥಾನ ರಸ್ತೆ- ಸಾಹುಕಾರ್ ಚೆನ್ನಯ್ಯ ರಸ್ತೆ- ಎನ್.ಎಸ್.ಎಸ್ ಕಛೇರಿ ಮೈದಾನ ಮತ್ತು ಸೋಮಾನಿ ಬಿ.ಎಡ್ ಕಾಲೇಜು ಮೈದಾನ ಪಾರ್ಕಿಂಗ್ ಸ್ಥಳವನ್ನು ತಲುಪಬಹುದಾಗಿದೆ.

ಹೆಚ್.ಡಿ ಕೋಟೆ ಕಡೆಯಿಂದ ಬರುವ ಬಸ್ಸುಗಳ ಮಹಾಬೋದಿ ಹಾಸ್ಟೆಲ್ ಮೈದಾನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮಾನಂದವಾಡಿ ರಸ್ತೆ- ಶ್ರೀರಾಂಪುರ ಜಂಕ್ಷನ್- ಎಡತಿರುವು- ರಿಂಗ್ ರಸ್ತೆ ಮೂಲಕ- ಬೋಗಾದಿ ರಿಂಗ್ ರಸ್ತೆ ಜಂಕ್ಷನ್- ಬಲತಿರುವು- ವಿ.ಎಂ.ಡಿ ಜಂಕ್ಷನ್- ಮಹಾಬೋದಿ ಹಾಸ್ಟೆಲ್ ಮೈದಾನ ಪಾರ್ಕಿಂಗ್ ಗೆ ತಲುಪಬಹುದಾಗಿದೆ.

ಇನ್ನು ಟಿ.ಎನ್ ಪುರ ಕಡೆಯಿಂದ ಬರುವ ಮತ್ತು ಸ್ಥಳೀಯ ಬಸ್ಸುಗಳಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಟಿ.ಎನ್ ಪುರ ರಸ್ತೆ- ರಿಂಗ್ ರಸ್ತೆ ಮೂಲಕ- ನಾಡಪ್ರಭು ಕೆಂಪೇಗೌಡ ವೃತ್ತ- ಲಿಂಕ್ ರಸ್ತೆ ಜಂಕ್ಷನ್- ಟಿ.ಎನ್ ನರಸಿಂಹಮೂರ್ತಿ ವೃತ್ತ- ಅಬ್ದುಲ್ ಕಲಂ ಅಜಾದ್ ವೃತ್ತ- ಸುಭಾಷ್ ಚಂದ್ರ ಬೋಸ್ ವೃತ್ತ- ಪುಟ್ಟಗೋಪಾಲ ಕೃಷ್ಣ ಶೆಟ್ಟಿ ವೃತ್ತ- ದಾಸಪ್ಪ ವೃತ್ತ- ಮೆಟ್ರೋಪೋಲ್ ಜಂಕ್ಷನ್- ಹುಣಸೂರು ರಸ್ತೆ- ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್- ಎಡತಿರುವು- ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಪಾರ್ಕಿಂಗ್ ಗೆ ತಲುಪಬಹುದಾಗಿದೆ.

ಇದೆಲ್ಲದರ ನಡುವೆ ದ್ವಿಚಕ್ರ  ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಯುವರಾಜ ಕಾಲೇಜು ಮೈದಾನ, ಮಹಾರಾಜ ಜೂನಿಯರ್ ಕಾಲೇಜು ಮೈದಾನ,  ಮಹಾರಾಣಿ ಕಾಲೇಜು  ಮೈದಾನ, ಅರಸು ಬೋರ್ಡಿಂಗ್ ಶಾಲೆ ಮೈದಾನ, ಅಗ್ನಿಶಾಮಕ ಠಾಣೆ ಮೈದಾನ, ಮಹಾಬೋದಿ ಹಾಸ್ಟೆಲ್ ಮೈದಾನ, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಿಲುಗಡೆ ಮಾಡಲು ಅವಕಾಶ ಮಾಡಿ ಕೊಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು