News Karnataka Kannada
Thursday, May 09 2024
ಹಾಸನ

ಜೆಡಿಎಸ್‌ ಅಕ್ರಮ ಬಯಲು ಮಾಡುವುದೇ ನನ್ನ ಗುರಿ, ದೇವರಾಜೇಗೌಡ ಸವಾಲ್‌

Jd(S) will expose illegalities if people of the constituency support it: Devaraje Gowda
Photo Credit : News Kannada

ಹೊಳೆನರಸೀಪುರ: ಕ್ಷೇತ್ರದ ಜನತೆ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಜೆಡಿಎ ಸ್‌ನ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಹೇಳಿದರು.

ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿ ಶಾಸಕ ಎಚ್.ಡಿ.ರೇವಣ್ಣನವರು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಸ್ವಯಂ ಅಭಿವೃದ್ಧಿಗೆ ಸಾಕಷ್ಟು ಸರಕಾರಿ ಕಾಮಗಾರಿಗಳನ್ನು ಮಾರ್ಪಾಟುಗೊಳಿಸಿಕೊಂಡಿದ್ದಾರೆ.

ಅವರ ಕುಟುಂಬದ ಒಡೆತನದ ಕಲ್ಯಾಣ ಮಂದಿರ, ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ರೈಲ್ವೆ ಮೇಲ್ಸೇತುವೆ ದಿಕ್ಕನ್ನೇ ಬದಲಿಸಿದ್ದಾರೆ. ಇದರಿಂದ ಅವರ ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳಾವಕಾಶವಾಗಿದೆ. ಅವರು ನೀರಾವರಿ ಮತ್ತು ಏತನೀರಾವರಿ ಅನುಕೂಲತೆ ಮಾಡಿರುವ ಕಡೆಗಳಲ್ಲಿ ಅವರ ಒಡೆತನದ ಕೃಷಿ ಭೂಮಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಅಭಿವೃದ್ಧಿ ಎಂದು ನಂಬಬೇಕೇ ? ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್‌ನ ಯಾವುದೇ ಬೆದರಿಕೆಗೆ ಹೆದರದೆ ಮುಕ್ತವಾಗಿ ಮತದಾನದಲ್ಲಿ ತೊಡಗಬೇಕು . ಬಹುತೇಕ ಸರಕಾರಿ ನೌಕರರು ಅವರಿಗೆ ಬೆದರಿ ಅವರ ಮಾತನ್ನು ಕೇಳುತ್ತಿದ್ದಾರೆ. ಪೊಲೀಸರು ಪ್ರಕರಣಗಳ ಪೂರ್ವಾಪರ ಅರಿಯದೇ ಏಕಪಕ್ಷೀಯವಾಗಿ ಕೇಸು ದಾಖಲಿಸದಂತೆ ರಾಜ್ಯ ಹಂತದಿಂದ ಸೂಚನೆ ಕೊಡಿಸಲಾಗಿದೆ. ಸದ್ಯದಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಸಂದರ್ಭ ದೋಷಪೂರಿತ ವಿವರ ಒದಗಿಸಿದ ಮತ್ತು ರೇವಣ್ಣ ಒಬ್ಬ ಜನಪ್ರತಿನಿಧಿಯಾಗಿ ಚುನಾವಣಾ ಅಕ್ರಮ ನಡೆಸಿದ ಬಗ್ಗೆ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಹಂತದಲ್ಲಿದೆ. ಮುಂದಿನ ೭ ದಿನಗಳೊಳಗೆ ತೀರ್ಪು ಹೊರಬೀಳುವ ಸಂಭವ ಇದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರೇಣು ಕುಮಾರ್, ತಾಲೂಕು ಮಂಡಳದ ಮಾಜಿ ಅದ್ಯಕ್ಷರುಗಳಾದ ಎಂ.ಎನ್.ರಾಜು, ಮಳಲಿ ನಾರಾಯಣಗೌಡ, ಶಾಂತಿಗ್ರಾಮ ಮಂಡಲದ ಅಧ್ಯಕ್ಷ ಶ್ರೀಹರಿ ಹಾಗೂ ತಾಲೂಕು ಕಾರ್ಯದರ್ಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು