News Karnataka Kannada
Friday, May 17 2024
ಹಾಸನ

“ಹಾಸನ ವಿಶ್ವವಿದ್ಯಾಲಯ” ಉದ್ಘಾಟನೆ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಹೇಮಗಂಗೋತ್ರಿ

Inauguration of "Hassan University"; Hemagangotri witnessed a historic moment
Photo Credit : News Kannada

ಹಾಸನ: ನಗರದ ಹೇಮ ಗಂಗೋತ್ರಿ ಸಭಾಂಗಣದಲ್ಲಿ “ಹಾಸನ ವಿಶ್ವ ವಿದ್ಯಾಲಯ” ವನ್ನು ನೂತನ ಕುಲಪತಿ ಫ್ರೋ. ತಾರಾನಾಥ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ವರ್ಚ್ಯುಯಲ್ ಮೂಲಕ ಉದ್ಘಾಟನೆ ಗೊಳ್ಳುತ್ತಿರುವ ೯ ವಿಶ್ವ ವಿದ್ಯಾಲಯಗಳ ಪೈಕಿ ಹಾಸನ ವಿಶ್ವ ವಿದ್ಯಾಲಯವೂ ಒಂದಾಗಿದ್ದು ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.
ಈ ಹಿಂದೆ ಸಂಸ್ಥೆಗಾಗಿ ದುಡಿದ ಅನೇಕರ ಶ್ರಮದ ಫಲವಾಗಿ ಇಂದು ವಿಶ್ವ ವಿದ್ಯಾನಿಲಯವಾಗಿ ಹೊರ ಹೊಮ್ಮುತ್ತಿದೆ, ಇಂದಿನಿಂದ ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು.

ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯು ಹಾಸನ ವಿಶೇಷ ಸ್ಥಾನ ಗಳಿಸಿದೆ, ರಸ, ಋಷಿಗಳ ನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿ ಮಾತನಾಡಿ, ವಿಶ್ವ ವಿದ್ಯಾನಿಲಯ ಎಂದರೆ ವಿಶ್ವಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡು ಗೆಯಾಗಿ ನೀಡುವ ಜವಾಬ್ದಾರಿಯುತ ಸಂಸ್ಥೆ, ಆದುದರಿಂದ ವಿಶ್ವ ವಿದ್ಯಾ ಲಯ ದ ಅಭಿವೃದ್ಧಿಗೆ ಕುಲಪತಿಗಳು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ೩೧ ವರ್ಷದ ಹಳೆಯ ಸ್ನಾತಕೋತ್ತರ ಕೇಂದ್ರ ಇಂದು ವಿಶ್ವ ವಿದ್ಯಾಲಯವಾಗಿ ಹೊರ ಹೊಮ್ಮುತ್ತಿರುವುದು ತುಂಬಾ ಸಂತೋ ಷದ ವಿಚಾರವಾಗಿದೆ, ಇದೊಂದು ಹಾಸನ ಜಿಲ್ಲೆಯ ಸಂಸ್ಕೃತಿಕ ಕೇಂದ್ರವಾ ಗಿ ಹೊರ ಹೊಮ್ಮಬೇಕಿದೆ, ಈ ನಿಟ್ಟಿನಲ್ಲಿ ಸುಸಜ್ಜಿತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಸಿ.ಈ. ಸುಜಾತ ಪ್ರೊ. ಮಂಜುನಾಥ, ಪ್ರೊ. ಮಹದೇವಪ್ಪ, ಪ್ರೊ. ಶಂಕರ್, ಪ್ರೊ. ಮಹಾದೇವ ಪ್ರಸಾದ್, ಪ್ರೊ. ರವೀಂದ್ರ ಬಾಬು, ಪ್ರೊ. ಪುಟ್ಟಸ್ವಾಮಿ, ಪ್ರೊ. ಹಾಲಪ್ಪ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು