News Karnataka Kannada
Sunday, April 28 2024
ಹಾಸನ

ಹೊಳೆನರಸೀಪುರ; ೧೮೦ ಕೋಟಿ ರೂಪಾಯಿಗಳ ಯೋಜನೆಯ ಅನುಷ್ಠಾನಕ್ಕೆ ಸಂಕಲ್ಪ

Holenarasipura; Rs 180 crore project to be implemented
Photo Credit : News Kannada

ಹೊಳೆನರಸೀಪುರ; ಪಟ್ಟಣದ ಸಮಗ್ರ ಯು.ಜಿ.ಡಿ. ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಶಾಸಕ ಹೆಚ್.ಡಿ.ರೇವಣ್ಣನವರ ಪರಿಶ್ರಮದಿಂದ ತರಲಾಗಿರುವ ೧೮೦ ಕೋಟಿ ರೂಪಾಯಿಗಳ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಲಾಗುತ್ತದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣನವರು ತಿಳಿಸಿದರು.

ಅವರು ಇಂದು ಪಟ್ಟಣದ ೧೭ ನೇ ವಾರ್ಡಿನಲ್ಲಿ ಪುರಸಭೆವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ತಾವು ಇತ್ತೀಚಿನ ಕೆಲವು ದಿನಗಳಿಂದ ಪಟ್ಟಣದ ಎಲ್ಲಾ ೨೩ ವಾರ್ಡ್‌ಗಳಿಗೆ ಪುರಸಭಾ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಪಟ್ಟಣದ ಜ್ವಲಂತ ಸಮಸ್ಯೆಗಳನ್ನು ಸಾರ್ವಜನಿಕರಿಂದ ತಿಳಿದು ಸಮಸ್ಯೆಗಳಿಗೆ ಕ್ಷಿಪ್ರವಾಗಿ ಪರಿಹಾರವನ್ನು ಸೂಚಿಸಲು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಪಟ್ಟಣದಲ್ಲಿ ಪ್ರಸ್ತುತ ಯು.ಜಿ.ಡಿ, ರಸ್ತೆ, ಚರಂಡಿ, ಬೀದಿ ದೀಪ,ವಸತಿ ಸಮಸ್ಯೆ,ಸ್ವಚ್ಛತೆ ಪರಿಸರ ಸಂರಕ್ಷಣೆಗೆ ಸಂಭಂದಿಸಿದಂತೆ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು, ಪುರಸಭಾ ವ್ಯಾಪ್ತಿಯ ಯು.ಜಿ.ಡಿ. ಲೈನ್ ಗಳು ಅಳವಡಿಸಿ ಸುಮಾರು ಮೂವತ್ತರಿಂದ ನಲವತ್ತು ವರ್ಷಗಳು ಆಗಿದ್ದು, ಜನ ಸಂಖ್ಯೆಯು ಈಗ ಹೆಚ್ಚಾಗಿದ್ದು, ಹಳೆಯ ಯು.ಜಿ.ಡಿ.ಲೈನ್‌ಗಳ ಒಳಚರಂಡಿಯಲ್ಲಿ ಕೊಳಚೆಯು ಸರಾಗವಾಗಿ ಹರಿಯಲು ಸಮಸ್ಯೆ ಎದುರಾಗುತ್ತಿದೆ, ಇದನ್ನು ಮನಗಂಡು ಶಾಸಕರು ೧೮೦ ಕೋಟಿ ರೂಪಾಯಿಗಳ ಸಮಗ್ರ ಯು.ಜಿ.ಡಿ. ಲೈನ್‌ಗಳನ್ನು ಹೊಸದಾಗಿ ಅಳವಡಿಸಲು ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಅನುಷ್ಠಾನಗೊಳಿಸಲು ಸಂಕಲ್ಪವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಎನ್.ಜ್ಯೋತಿಮಂಜುನಾಥ್, ಪುರಸಭಾ ಸದಸ್ಯೆ ನಾಗಮಣಿ, ಪುರಸಭೆ ಅಧಿಕಾರಿಗಳಾದ ರಮೇಶ್,ಪರಿಸರ ಇಂಜಿನಿಯರ್ ರುಚಿದರ್ಶಿನಿ,ಆರೋಗ್ಯ ನಿರೀಕ್ಷಕ ವಸಂತ್‌ಕುಮಾರ್ ಇನ್ನಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು