News Karnataka Kannada
Wednesday, May 01 2024
ಹಾಸನ

ಹಾಸನ: ರೈತರಿಗೆ ನ್ಯಾನೋ ಫುಡ್ ಪಾರ್ಕ್ ನಿರ್ಮಾಣ

Nano Food Park to be constructed for farmers
Photo Credit : News Kannada

ಹಾಸನ: ತಾಲೂಕಿನ ಓಡನ ಹಳ್ಳಿಯಲ್ಲಿ ಈಗಾಗಲೇ ನ್ಯಾನೋ ಫುಡ್ ಪಾರ್ಕ್ ಮಾಡಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಓಡನಹಳ್ಳಿ ನಾನೋ ಫುಡ್ ಪಾರ್ಕ್ ಹಾಸನದ ಮೊದಲ ಫುಡ್ ಪಾರ್ಕ್ ಆಗಿರುತ್ತದೆ. ಕೇಂದ್ರ ಸರ್ಕಾರ ಫುಡ್ ಪಾರ್ಕ್ ಎನ್ನುವ ಪರಿಕಲ್ಪನೆ ತಂದಿದ್ದು, ಸ್ಥಳೀಯ ರೈತರು ಬೆಳೆಯುವ ಬೆಳೆಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡಿ ಒಂದಷ್ಟು ಆದಾಯ ಜಾಸ್ತಿ ಸಿಗುವ ಹಾಗೆ ಮಾಡುವುದು ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದು, ಆದರಂತ ಹುಟ್ಟಿದ್ದೇ ಓಡನಹಳ್ಳಿ ನಾನೋ ಫುಡ್ ಪಾರ್ಕ್ ಎನ್ನುವ ಒಂದು ಪರಿಕಲ್ಪನೆ ಆಗಿದೆ ಎಂದರು.

ಈ ಒಂದು ಫುಡ್ ಪಾರ್ಕ್ ಸ್ಥಳೀಯವಾಗಿ ಬೆಳೆಯುವ ರಾಗಿ, ಶುಂಠಿ, ಜೋಳ ಮತ್ತು ತೆಂಗಿನ ಉಪ ಉತ್ಪನ್ನಗಳನ್ನು ತಯಾರು ಮಾಡುವುದು. ಈಗಾಗಲೇ ಸುಮಾರು ೪ ಉತ್ಪನ್ನಗಳನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸಿರುತ್ತೇವೆ. ಮತ್ತು ಈಗ ನಾವು ಪೂರ್ಣ ಪ್ರಮಾಣದ ಉತ್ಪಾದನೆಗೆ ಮುಂದಾಗಿರುತ್ತೇವೆ ಎಂದು ಉದ್ದೇಶ ತಿಳಿಸಿದರು.

ಯಂತ್ರೋಪಕರಣ ಗನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಎಣ್ಣೆ ಗಾಣ ಅಳವಡಿ ಸಲಾಗಿದೆ. ಶುಂಠಿಯಲ್ಲಿ ಉಪ ಉತ್ಪನ್ನಗಳನ್ನು ತಯಾರು ಮಾಡುವ ಯಂತ್ರೋಪಕರಣಗಳು. ಸಿರಿಧಾನ್ಯ ಸಂಸ್ಕರಣ ಘಟಕ ತೆಂಗಿನ ಉಪ ಉತ್ಪನ್ನಗಳನ್ನು ತಯಾರಿಸುವ ಯಂತ್ರೋಪಕರಣಗಳು ತಯಾರು ಮಾಡುವ ಎಲ್ಲಾ ಉತ್ಪನ್ನಗಳು ರಫ್ತು ಗುಣಮಟ್ಟ ಹೊಂದಿರುತ್ತದೆ ಎಂದು ಹೇಳಿದರು.

ಈ ಒಂದು ಫುಡ್ ಪಾರ್ಕ್ ಮುಂದಿನ ೧೦ ವರ್ಷ ಗಳಲ್ಲಿ ಕೃಷಿಯಲ್ಲಿ ಆಗುವ ಬದಲಾವಣೆ ಅಂಶಗಳನ್ನು ಆಧರಿಸಿ ಶುರು ಮಾಡಲಾಗುತ್ತಿದೆ. ಈ ಒಂದು ಫುಡ್ ಪಾರ್ಕ್ ನ ಮಾರ್ಗದರ್ಶನವನ್ನು ಸುತ್ತ ಮುತ್ತಲಿನ ೨೫೦ ಕ್ಕು ಹೆಚ್ಚು ಸಣ್ಣ, ಅತಿ ಸಣ್ಣ ರೈತ ಕುಟುಂಬಗಳು ಪಡೆದುಕೊಂಡದ್ದು ಆದಲ್ಲಿ ಸರಾಸರಿ ಪ್ರತಿ ತಿಂಗಳು ಸುಮಾರು ೧೮- ೨೦ ಸಾವಿರ ಹಣ ದುಡಿದುಕೊಳ್ಳಬಹುದು ಮತ್ತು ಆರ್ಥಿಕವಾಗಿ ಸದೃಢ ರಾಗಬಹುದು ಎಂಬ ನಿರೀಕ್ಷೆ ಮಾಡಲಾಗಿದ್ದು ಇದರ ಸದುಪಯೋಗಪ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964979899 ಸಂಪರ್ಕಿಸ ಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು