News Karnataka Kannada
Friday, May 03 2024
ಹಾಸನ

ಬೇಲೂರು: ಕುರಿಗಳ ತಾಣವಾದ ಪುರಸಭೆ ಪಾರ್ಕ್

Belur: Municipal Park, a sheep shelter
Photo Credit : News Kannada

ಬೇಲೂರು: ಸಾರ್ವಜನಿಕರ ವಿಶ್ರಾಂತಿ ಪಡೆಯುವ ಪಾರ್ಕ್ ಬದಲು, ಕುರಿಗಳ ಪಾರ್ಕ್ ಆಗಿ ಬದಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಪುರಸಭೆ ವ್ಯಾಪ್ತಿಗೆ ಬರುವ ೨೩ ವಾರ್ಡ್ ಗಳಲ್ಲಿಯೂ,೨೩ ಪಾರ್ಕ್‌ಗಳಿವೆ ಎಂದು ಸಾರ್ವ ಜನಿಕ ವಾಗಿ ಲೆಕ್ಕಕೊಟ್ಟಿದ್ದಾರೆ. ಆದರೆ ಇಪ್ಪತ್ಮೂರು ಪಾರ್ಕ್ ಗಳ ಪೈಕಿ ಕೆಲ ಪಾರ್ಕ್‌ಗಳು ಮಾಯವಾಗಿ,ಬೆರಳೆಣಿಕೆಯಷ್ಟು ಮಾತ್ರ ಲೆಕ್ಕದಲ್ಲಿವೆ. ಅದರಲ್ಲಿ ಒಂದೆರಡು ಹೊಸದಾಗಿ ದುರಸ್ತಿಯಾಗಿ, ಜೀವ ಉಳಿಸಿಕೊಂಡರೆ.

ಮತ್ತೊಂದೆಡೆ,ಬಹುತೇಕ ಪಾರ್ಕ್ ಗಳು ಕೆಲ ಉದ್ಯಮಿಗಳ, ಮತ್ತು ಬಲಿಷ್ಠ ರಾಜಕಾರಣಿಗಳ, ಪಾಲಾಗಿ, ಐಶಾರಾಮಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಹರಿದು ಹಂಚಿ ಹೋಗಿವೆ. ಅದರಲ್ಲಿ,ಮಾತ್ರ “ಮನೆಗೆ ಒಬ್ಬ ಯಜಮಾನನಿದ್ದಂತೆ”ಅನ್ನೋ ಹಾಗೆ, ಒಂದೆ ಒಂದು ಪಾರ್ಕ್ ಮಾತ್ರ, ನಗರದ ಮದ್ಯಭಾಗದ ಜೂನಿಯರ್ ಕಾಲೇಜು ಮೈದಾನದ ಓವರ್ ಟ್ಯಾಂಕ್ ಬಳಿ ಇತ್ತು ಅನ್ನಿಸಿತ್ತು,ಆದರೆ ಅದು ಕೂಡ ಹಾಳು ಕೊಂಪೆಯಾಗಿ, ದನ ಕುರಿಗಳ ತಾಣವಾಗಿ ಮಾರ್ಪಟ್ಟಿದೆ ಎಂಬತ್ತಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೆ, ಶಿಥಿಲಗೊಂಡ ಓವರ್ ಟ್ಯಾಂಕ್ ಕೆಡವಿದ ಹಿನ್ನೆಲೆ,ಪಾರ್ಕ್ ಹದಗೆಟ್ಟು ವರ್ಷವೇ ಕಳೆಯುತ್ತಾ ಬಂದರೂ ಕೂಡ ಪುರಸಭೆ ಅಧಿಕಾರಿಗಳು ಮಾತ್ರ ಪಾರ್ಕ್ ನಮ್ಮದೇನಾ? ಎಂಬಂತೆ ಕಣ್ಮುಚ್ಚಿ ಕುಳಿತಿದ್ದು, ಹೇಳೋರು, ಕೇಳೋರು ಯಾರು ಇಲ್ಲ ಎಂಬಂತೆ ಕಾಣುತ್ತಿದೆ. ಪುರಸಬೆ ಚುನಾವಣೆ ಮುಗಿದು, ಒಂದೂವರೆ ವರ್ಷ ಕಳೆದರೂ,ಪಾರ್ಕ್ ಗಳ ಅಭಿವೃದ್ದಿ ಕಾಣಲಿಲ್ಲ. ಅಧಿಕಾರಿಗಳು ಮಾತ್ರ ಸಂಬಳ ಎಣಿಸಿಕೊಳ್ಳುವತ್ತ ಮುಂದಾಗಿದ್ದಾರೆ ಎಂದು ಸಾರ್ವ ಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು