ಹಾಸನ: ಕಳೆದ ಐದು ವರ್ಷ ಹಾಸನ ವಿಧಾನಸಭೆ ಕ್ಷೇತ್ರದ ಶಾಸಕನಾಗಿ ನಾನು ಕೆಲಸ ಮಾಡಿದ್ದು ಇದನ್ನು ಗಮನಿಸಿ ಜನರು ಮತ ಹಾಕುತ್ತಾರೆ ಎಂದು ಶಾಸಕ ಪ್ರೀತಂ ಜೆ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ರಾಜಕಾರಣ ಅನ್ನೋ ದು ಒಂದು ತಪಸ್ಸು ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಕೋವಿಡ್ ಸಂದರ್ಭದಲ್ಲಿ ಯಾರ್ಯಾರು ಎಲ್ಲೆಲ್ಲಿ ಇದ್ದರೂ ಎಂದು ಜನರಿಗೆ ತಿಳಿದಿದೆ. ಪ್ರೀತಂ ಗೌಡ ಮನೆ ಮನೆಗೆ ತೆರಳಿ ಸಹಾಯ ಮಾಡಿದ್ದನ್ನು ಜನರು ಗಮನಿಸಿದ್ದಾರೆ.
ನನ್ನ ಕಾರ್ಯಕರ್ತರೇ ನನ್ನ ಶಕ್ತಿ, ಪ್ರೀತಂಗೌಡನ ಮುಖ ನೋಡಿ ಐದು ಪರ್ಸೆಂಟ್ ಮತ ಬರಬಹುದು ಉಳಿದ ಓಟು ನಮ್ಮ ಕಾರ್ಯಕರ್ತರು, ಮುಖಂಡರ ಪರಿಶ್ರಮ ಎಂದರು.