News Karnataka Kannada
Thursday, May 02 2024
ಹಾಸನ

ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ವ್ಯಕ್ತಿ ಸುಭಾಷ್ ಚಂದ್ರಬೋಸ್

Subhash Chandra Bose- Pritam J. Bose was a great man who ignited the fire of struggle among the youth. Gowda
Photo Credit : News Kannada

ಹಾಸನ: ಸ್ವಾತಂತ್ರ್ಯವನ್ನು ಕೊಡಿ ಎಂದು ಕೇವಲ ಬಾಯಿ ಮಾತಲ್ಲಿ ಕೇಳಿದ್ರೆ ಸಾಕಾಗುತ್ತಿಲ್ಲ ಎಂದು ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ವ್ಯಕ್ತಿ ಸುಭಾಷ್ ಚಂದ್ರಬೋಸ್ ಒಬ್ಬರೂ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.

ನಗರದ ಬಿ.ಎಂ. ರಸ್ತೆ ಹುಡಾ ಕಛೇರಿ ಬಳಿ ಇರುವ ಮೈದಾನದಲ್ಲಿ ಶಾಸಕ ಪ್ರೀತಂ ಜೆ. ಗೌಡ ಸ್ನೇಹ ಬಳಗ ಮತ್ತು ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಭಾಷ್ ಝೇಂಕಾರ-೨೦೨೩, ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ ೧೨೬ನೇ ಜಯಂತಿ ಅಂಗವಾಗಿ ಅಂತರ್ ಶಾಲಾ ಸಮೂಹ ನೃತ್ಯ ಸ್ಪರ್ಧೆ ಹಾಗೂ ಚಿತ್ರಕಲೆ, ಗಣಿತ, ಪ್ರಬಂಧ, ಉತ್ತಮ ಕೈ ಬರಹ, ಸ್ಪೆಲ್ ಬಿ ಸ್ಪರ್ಧೆಗಳ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜ್ಯೋತಿ ಬೆಳಗು ವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಹಿಂದಿನ ಸ್ವಾತಂತ್ರ್ಯಕ್ಕಾಗಿ ನಡೆದ ಘಟನೆಯನ್ನು ಮೆಲುಕು ಹಾಕುತ್ತಾ, ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ ದೇಶ ಭಕ್ತಿ ಮತ್ತು ರಾಷ್ಟ್ರೀಯತೆ ತಿಳಿದರೆ ಒಂದು ಕ್ಷಣ ರೋಮಾಂಚನ ಆಗುತ್ತದೆ. ಯುಕರನ್ನು ಬಡಿದೆಬ್ಬಿಸಿದವರು ಸುಭಾಷ್ ಚಂದ್ರ ಬೋಷ್.

ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದವರು ನಮ್ಮ ನೇತಾಜಿ. ಬ್ರಿಟಿಷರು ಕೇವಲ ಶಾಂತಿ ರೂಪದಲ್ಲಿ ಸ್ವಾತಂತ್ರ್ಯ ಕೇಳಿದರೆ ಕೊಡುವುದಿಲ್ಲ ಎಂದು ತಿಳಿದು ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ವ್ಯಕ್ತಿಗಳ ಸಾಲಲ್ಲಿ ಸುಭಾಷ್ ಚಂದ್ರಬೋಸ್ ಅವರ ಸಹ ಒಬ್ಬರು. ಅವರ ಜೀವನ ಚರಿತ್ರೆಯನ್ನು ತಿಳಿದರೆ ಒಂದು ಕ್ಷಣ ರೋಮಾಂಚನವಾಗುತ್ತದೆ. ಶತ ಶತಮಾನಗಳಿಂದ ಭಾರತ ದೇಶ ಬ್ರಿಟಿಷರ ದುರಾಡಳಿತದಿಂದ ಸೆರೆ ಯಾಗಿತ್ತು. ಮುಕ್ತಿಕೊಡಿಸುವಲ್ಲಿ ಇವರ ಹೋರಾಟ ಅಪಾರ ವಾಗಿದೆ. ಕೆಲ ದೇಶಗಳು ಪಾಶ್ಚಿಮತ್ಯದಿಂದ ತತ್ತರಿಸಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಆದರೆ ಭಾರತ ದೇಶ ನೂರಾರು ವರ್ಷಗಳ ಕಾಲ ಬ್ರಿಟಿಷರ ಕೈವಶ ವಾಗಿದ್ದರು ತನ್ನ ಸ್ವಾಮ್ಯತೆಯನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದು ಈ ಮಣ್ಣಿನ ಗುಣವಾಗಿದ್ದು, ಸ್ವಾಮಿ ವಿವೇಕನಂದರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ನರೇಂದ್ರ ಮೋದಿಯವರಿಂದ ಈ ವರೆಗಿನ ಯುವಕರ ತನಕ ಆ ಪ್ರೇರಣೆ ಮುಂದುವರೆಯುತ್ತಲೆ ಇದೆ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಪ್ರಶಸ್ತಿ ಒಂದೆ ಮುಖ್ಯವಲ್ಲ ಜೊತೆಯಲ್ಲಿ ಬೆನ್ನು ತಟ್ಟುವ ಕೆಲಸವಾಗಬೇಕು ಎನ್ನುವ ಉದ್ದೇಶದಲ್ಲಿ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಅವರಲ್ಲಿನ ಕೌಶಲ್ಯಗಳನ್ನು ಹೊರವುದು ಬಹುಮುಖ್ಯ. ಶಿಕ್ಷಣ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಹೊರ ತರುವಂತಹ ಇಂತಹ ಕಾರ್ಯಕ್ರಾಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಶಾಲಾ ದಿನಗಳಿಂದಲೇ ಇಂತಹ ವೇದಿಕೆಯನ್ನು ಕಲ್ಪಿಸಿ ಕೊಡಬೇಕು. ಇನ್ನು ಮುಂದೆ ಪ್ರತಿ ವರ್ಷ ಈ ಕಾರ್ಯಕ್ರಮವು ಇನ್ನು ಉತ್ತಮ ರೀತಿಯಲ್ಲಿ ಮುಂದುವರೆಯಲಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ನಗರ ಸಭೆ ಅಧ್ಯಕ್ಷ ಆರ್. ಮೋಹನ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು