News Karnataka Kannada
Sunday, May 05 2024
ಹಾಸನ

ಹಾಸನ: ಶಾಸಕ ಪ್ರೀತಂಗೌಡ ಅವರಿಂದ ಹಕ್ಕುಪತ್ರ ವಿತರಣೆ

MLA Preetham Gowda distributes title deeds
Photo Credit : News Kannada

ಹಾಸನ: ನಗರದ ೨೨ ನೇ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ವಾರ್ಡ್ ಗೆ ಆಗಮಿಸಿದ ಶಾಸಕರಿಗೆ ನಿವಾಸಿಗಳು ಪಟಾಕಿ ಹಚ್ಚಿ ಅದ್ದೂರಿಯಾಗಿ ಸ್ವಾಗತಿಸಿದರು.

ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ನಂತರ ಮಾತನಾಡಿದ ಶಾಸಕ ಪ್ರೀತಂಗೌಡ ನಾನು ನುಡಿದಂತೆ ನಡೆದುಕೊಂಡಿದ್ದೇನೆ ಸುಮಾರು ವರ್ಷಗಳಿಂದ ಆಗದ ಕೆಲಸವನ್ನು ನಾನು ಮಾಡಿದ್ದೇನೆ ಹಕ್ಕುಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪಿಸಿದ್ದೇನೆ ಇ ವಾರ್ಡ್ ಅಲ್ಲಿ ೨೫೦ ನಿವಾಸಿಗಳಿಗೆ ಇಂದು ವಿತರಣೆ ಮಾಡಿದ್ದು .ಮುಂದಿನ ದಿವಸಗಳಲ್ಲಿ ಇನ್ನುಳಿದ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವುದಾಗಿ ತಿಳಿಸಿದರು.

ಸುಮಾರು ವರ್ಷಗಳಿಂದ ಕಾಯುತ್ತಿದ್ದ ನಿವಾಸಿಗಳಿಗೆ ಇಂದು ಅಧಿಕೃತವಾಗಿ ಹಕ್ಕುಪತ್ರ ದೊರೆತಿದ್ದು ನಿವಾಸಿಗಳೆಲ್ಲರೂ ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿ ಮುಂಬರುವ ಚುನಾವಣೆಯಲ್ಲಿ ಶಾಸಕರನ್ನು ಬೆಂಬಲಿಸುವುದಾಗಿ ತಿಳಿಸಿದರು. ನಗರಸಭೆ ಅಧ್ಯಕ್ಷ ಮೋಹನ್ ಆರ್, ಮುಖಂಡರಾದ ಮಣಿಕಂಠ, ಅರುಣ್,ರೋಷನ್ ಜಮೀರ್,ವಾಸಿಕ್,ಅಪ್ಪಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು