News Karnataka Kannada
Thursday, May 02 2024
ಹಾಸನ

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

Anganwadi workers led by CITU stage protest demanding fulfilment of various demands
Photo Credit : News Kannada

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪರಿಷ್ಕೃತ ಆಯ್ಕೆಯ ಮಾರ್ಗಸೂಚಿ ಆದೇಶದ ತಿದ್ದುಪಡಿಗಾಗಿ ಮತ್ತು ವಯೋಮಿತಿಯ ಆಧಾರದಲ್ಲಿ ಮುಂಬಡ್ತಿ ನೀಡಬೇಕು. ೩-೧೨-೨೦೨೨ ರ ಇಲಾಖೆಯ ನಿರ್ದೇಶನದ ಪ್ರಕಾರ ಪರಿಷ್ಕೃತ ಆಯ್ಕೆ ಮಾರ್ಗ ಸೂಚಿಗಳನ್ನು ಮಾಡಿರುವುದರಿಂದ ಈಗಾಗಲೇ ಇರುವ ಇಲಾಖೆಯ ೨೩-೯-೨೦೧೭ ಮತ್ತು ೧೯-೧-೨೦೧೯ ರ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಮತ್ತು ಅನುಭವ ಇರುವ ಅಂಗನವಾಡಿ ಸಹಾಯಕಿ ಮತ್ತು ಮಿನಿ ಅಂಗನವಾಡಿ ಮುಂಬಡ್ತಿಗೆ ಅನ್ವಯವಾಗುತ್ತಿದೆ.

ಪರಿಷ್ಕೃತ ಆದೇಶವನ್ನು ಅನ್ವಯಿಸಬಾರದು ಎಂದು ಇಲಾಖೆಗೆ ೧೪-೧೨- ೨೦೨೨ ರಂದು ಮನವಿ ಕೊಟ್ಟು ವಿನಂತಿಸಿದ್ದರು ಇಲಾಖೆ ಪರಿಗಣಿಸಿಲ್ಲ. ಇದರಿಂದ ಸಾವಿರಾರು ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯವಾಗುತ್ತಿದೆ. ಆದ್ದರಿಂದ ಪರಿಷ್ಕೃತ ಆದೇಶವನ್ನು ತಿದ್ದುಪಡಿ ಮಾಡಬೇಕು. ಮತ್ತು ವಯೊಮಿತಿಯ ಆಧಾರದಲ್ಲಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ೨೦೨೨-ಆಗಸ್ಟ್-೧ ರ ಕೇಂದ್ರ ಸರ್ಕಾರದ ಸಕ್ಷಮ್ ಅಂಗನವಾಡಿ ಕೇಂದ್ರಗಳ ಮಾರ್ಗಸೂಚಿಯನ್ನು ನೀಡದೆ, ಈ ಮಾರ್ಗ ಸೂಚಿಗಳನ್ನು ಭಾರತದ ಇತರೆ ಯಾವ ರಾಜ್ಯಗಳಲ್ಲಿಯೂ ಹೊಸ ಮಾರ್ಗಸೂಚಿಗಳನ್ನು ಅಳವಡಿಸಿಲ್ಲ ಆದರೆ ನಮ್ಮ ಸರ್ಕಾರ ಇದರ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡದೇ ಕೂಡಲೇ ಬದಲಾಯಿಸಿದೆ. ಮಾತ್ರವಲ್ಲದೆ ಬೆಳಗಾವಿ, ಹಾಸನ, ತುಮಕೂರು, ಕೋಲಾರ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಅರ್ಹತೆಯಿರುವ ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿ ಕೊಟ್ಟಿಲ್ಲ ಆದ್ದರಿಂದ ಈ ಆದೇಶವನ್ನು ಬದಲಾಯಿಸಿ ವಯೋಮಿತಿಯ ಆಧಾರದ ಮೇಲೆ ಮುಂಬಡ್ತಿ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ, ಖಜಾಂಚಿ ಜಿ.ಪಿ. ಶೈಲಜಾ, ಪ್ರಧಾನ ಕಾರ್ಯದರ್ಶಿ ಎಂ. ಮಂಜೂಳಾ, ಸಿಐಟಿಯು ಮುಖಂಡರಾದ ಧರ್ಮೇಶ್, ಅರವಿಂದ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು