ಹಾಸನ: ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಇಸ್ರೇಲ್ ಹಸುಗಳನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ನ ಮುಖ್ಯಸ್ಥ ಅಶೋಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಫೆಬ್ರವರಿ ೧೯- ೨೨ ರಂದು ಇಸ್ರೇಲ್ ಪ್ರವಾಸದ ವೇಳೆ ಒಂದು ಹಳ್ಳಿಯಲ್ಲಿ ಹೈನುಗಾರಿಕೆ ಮಾಡುವ ವ್ಯಕ್ತಿ ೩೦೦ ಹಸುಗಳನ್ನು ಸಾಕುವ ಮೂಲಕ ನಿರೀಕ್ಷೆಗೂ ಮೀರಿ ಲಾಭಗಳಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ.
ಇಸ್ರೇಲ್ ನ ಒಂದು ಹಸು ದಿನವೊಂದಕ್ಕೆ ೫೦ ರಿಂದ ೮೦ ಲೀಟರ್ ಹಾಲನ್ನು ನೀಡುತ್ತದೆ ಹಾಗೂ ಹಾಲಿನ ಗುಣಮಟ್ಟ ಬಹಳ ಉತ್ಕೃಷ್ಟವಾಗಿ ಇದೆ. ಆದ್ದರಿಂದ ಈ ಹಸುಗಳನ್ನು ನಮ್ಮ ರೈತರಿಗೆ ಒದಗಿಸಿದಲ್ಲಿ ಹೈನುಗಾರಿಕೆ ಲಾಭದಾಯಕವಾಗಲಿದೆ ಎಂದರು.
ಇಲ್ಲಿನ ರೈತರಿಗೆ ಹೈನುಗಾರಿಕೆಯಲ್ಲಿ ಲಾಭ ತಂದು ಕೊಡುವ ಇಸ್ರೇಲ್ ಹಸುಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲ ತಿಂಗಳಲ್ಲಿ ನೂರು ಹಸುಗಳನ್ನು ಇಸ್ರೇಲ್ ನಿಂದ ತರಲು ನಿರ್ಧಾರ ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.