News Karnataka Kannada
Thursday, May 02 2024
ಹಾಸನ

ಬೇಲೂರು: ಪುಷ್ಪಗಿರಿ ಮಹಿಳಾ ಸಂಘದಿಂದ ಉಪ್ಪಿನಕಾಯಿ ಉತ್ಪನ್ನ ಬಿಡುಗಡೆ

Pushpagiri Mahila Sangha launches pickle product
Photo Credit : News Kannada

ಬೇಲೂರು: ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘದಿಂದ ರೂಪಿತ ವಾದ ಮಾವಿನಕಾಯಿ ಉಪ್ಪಿನಕಾಯಿ ಉತ್ಪನ್ನವನ್ನು ಬೇಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ಬಳಿ ಮಹಿಳಾ ಸಂಘದ ಪದಾಧಿ ಕಾರಿಗಳು, ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿಗಳು ಹಾಗೂ ಸದಸ್ಯರು ಬಿಡುಗಡೆ ಮಾಡಿ ಮಾರಾಟ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನು ತಧನಂಜಯ್, ಮಹಿಳೆಯರ ಸಮಗ್ರ ಸಬಲೀಕರಣದ ದೃಷ್ಟಿಯಿಂದ ಪರಮಪೂಜ್ಯ ಜಗದ್ಗುರುಗಳಾದ   ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ೨೦೨೦ ರಲ್ಲಿ ಪುಷ್ಪಗಿರಿ ಗ್ರಾಮೀ ಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ರಾಜ್ಯದ ಹತ್ತು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸಿದ್ದು, ಮಹಿಳೆಯ ಅಭಿವೃದ್ಧಿಗೆ ಹತ್ತಾರು ಯೋಜನೆ ರೂಪಿಸಲಾಗಿದೆ. ಪೂಜ್ಯರ ಮಾರ್ಗದರ್ಶನದಂತೆ ಕೇವಲ ಹಣಕಾಸಿಗೆ ಸೀಮಿತ ವಾದ ಸಂಸ್ಥೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಪರಿಸರ, ಸಾಂಸ್ಕೃತಿಕ ಹತ್ತಾರು ಕ್ಷೇತ್ರದಲ್ಲಿ ಅದ್ವಿತೀಯ ಕೆಲಸ ಮಾಡುತ್ತಿದೆ.

ವಿಶೇಷವಾಗಿ ಗ್ರಾಮೀಣರು ಪಟ್ಟಣಕ್ಕೆ ವಲಸೆಯನ್ನು ತಡೆಯ ಲು ಸ್ವ ಉದ್ಯೋಗ ಪರಿಕಲ್ಪನೆ ಯಲ್ಲಿ ಸಣ್ಣ ಸಣ್ಣ ಗುಡಿಕೈಗಾರಿಕೆಗೆ ಉತ್ತೇಜನ ಜೊತೆಗೆ ಆರ್ಥಿಕ ಸಹಾಯ ಮತ್ತು ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ ಎಂದರು.

ಈಗಾಗಲೇ ಉತ್ತರ ಕರ್ನಾಟಕ ಭಾಗದ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ವಿದ್ಯುತ್ ದೀಪ ವನ್ನು ತಯಾರಿಕೆ ಮಾಡಿದ್ದು, ಸ್ವತಃ ಮುಖ್ಯಮಂತ್ರಿಗಳು ಬಿಡುಗಡೆ ನಡೆಸಿ ಪೂಜ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನೂ ಮಲೆನಾಡು ಭಾಗದ ಅರೇಹಳ್ಳಿ ಮಹಿಳಾ ಸ್ವ ಸಹಾಯ ಸಂಘದವರು ಗುಣ ಮಟ್ಟದಿಂದ ಕೂಡಿದ ಕಾಫಿಪುಡಿ ತಯಾರಿಸಿ ಮಾರಾಟ ನಡೆಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಅಂತಯೇ ಉತ್ತರ ಕರ್ನಾಟಕ ಭಾಗದಲ್ಲಿನ ಖಡಕ್ ಮಾವಿ ನಕಾಯಿ ಉಪ್ಪಿನಕಾಯಿಯನ್ನು ತಯಾರಿಸಿದ್ದು, ಈ ಬೇಲೂರು ಭಾಗದಲ್ಲಿ ಪೂಜ್ಯರ ಮಾರ್ಗ ದರ್ಶನದಲ್ಲಿ ಇಂದು ಬಿಡುಗಡೆ ಮತ್ತು ಮಾರಾಟ ನಡೆಲಾಗಿದೆ. ಪ್ರತಿ ಮಹಿಳೆಯರು ಒಂದಾಲ್ಲ ಒಂದು ಸ್ವ ಉದ್ಯೋಗ ನಡೆಸಲು ಮುಕ್ತ ಅವಕಾಶ ಇರುವ ಕಾರಣ ದಿಂದ ಗುಡಿ ಕೈಗಾರಿಕೆ ನಡೆಸಲು ಮುಂದಾಗಿ ಕುಟುಂಬದ ನಿರ್ವಹಣೆ ಜೊತೆಗೆ ಹತ್ತಾರು ನಿರುದ್ಯೋಗಿಗಳಿಗೆ ಕೆಲಸ ನೀಡುವ ಕಡೆ ಮುಂದಾಗಬೇಕಿದೆ ಎಂದು ತಿಳಿಸಿದರು.

ಬೇಲೂರು ಪುಷ್ಪಗಿರಿ ಮಹಿಳಾ ಸಂಘದ ಪ್ರತಿನಿಧಿ ವಿಜಯಲಕ್ಷ್ಮಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸಾವಿ ರಾರು ಮಠಗಳಿದ್ದು ಅವುಗಳು ದಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಪುಷ್ಪಗಿರಿ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾ ರ್ಯ ಮಹಾಸ್ವಾಮಿಗಳು ವಿಭಿನ್ನ ಎಂಬಂತೆ ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಮಹಿಳಾ ಸಬಲೀ ಕರಣಕ್ಕೆ ಮುಂದಾಗಿರುವುದು ನಿಜಕ್ಕೂ ಅಗಮ್ಯವಾಗಿದೆ. ಪೂಜ್ಯರ ಸಾಧನೆ ಈಗಾಗಲೇ ರಾಜ್ಯ.ರಾಷ್ಟ್ರ ಮತ್ತು ಅಂತರಾ ಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಪುಷ್ಪಗಿರಿ ಮಠ ನಾಡಿನಲ್ಲೆಡೆ ಬೆಳಗಿದೆ. ಮುಂದಿನ ದಿನದಂದು ಕುಟುಂಬಗಳಿಗೆ ಅಗತ್ಯ ಇರುವ ವಸ್ತುಗಳನ್ನು ತಯಾರಿಸುವ ಕಡೆ ಒಲವು ಹೊಂದಿದ್ದು ಪೂಜ್ಯರ ಆಶೀ ರ್ವಾದ ಇರಲಿ ಎಂದರು.

ಈ ಸಂದರ್ಭದಲ್ಲಿ ಬೇಲೂರು ಪುಷ್ಪಗಿರಿ ಮಹಿಳಾ ಸಂಘದ ಪದಾಧಿಕಾರಿಗಳಾದ ದ್ರಾಕ್ಷಯಿಣಿ, ಗೀತಾ, ವನಜಾಕ್ಷಿ, ಮೀನಾಕ್ಷಿ, ವೀಣಾ, ರೇಣುಕಾ, ವನಜಾಕ್ಷಿ, ಅಲ್ಪಯಾ ಇನ್ನೂ ಮುಂತಾದವರು ಹಾಜರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು