News Karnataka Kannada
Wednesday, May 08 2024
ಹಾಸನ

ಬೇಲೂರು: ಭ್ರಷ್ಟಾಚಾರ ತೊಲಗಬೇಕಾದರೆ ಕಾಂಗ್ರೆಸ್ ತೊಲಗಿಸಿ- ಜೆ.ಪಿ.ನಡ್ಡಾ

Belur: If you want to get rid of corruption, get rid of Congress: JP Nadda-
Photo Credit : By Author

ಬೇಲೂರು: ದೇಶದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಮೊದಲು ದೇಶದಿಂದ ಕಾಂಗ್ರೆಸ್ ಪಕ್ಷವನ್ನು ತೊಲಗಿಸಬೇಕಿದೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡ ಬಿಜೆಪಿಯೆ ಭರವಸೆ ಸಾರ್ವಜನಿಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನೀಡಿದ ಬಜೆಟ್ ಜನಪರವಾಗಿದೆ. ಮಹಿಳೆಯರಿಗೆ ಹಾಗೂ ಕೃಷಿಕರಿಗೆ ನೀಡಿದ ಅದ್ಯತೆ ನಿಜಕ್ಕೂ ಅದಮ್ಯವಾಗಿದೆ. ಬಜೆಟ್ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಸಹಕಾರಿಯಾಗಿದೆ. ಬಜೆಟ್ ಬಗ್ಗೆ ರಾಜ್ಯದ ಜನತೆ ಹಾಗೂ ಕೇಂದ್ರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಕಾಂಗ್ರೆಸ್ ವಿನಾ ಕಾರಣ ಬಜೆಟ್‌ನ್ನು ಟೀಕಿಸುವ ಅತುರದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ ಎಂದು ಇಲ್ಲ-ಸಲ್ಲದ ಆರೋಪ ಮಾಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದರು.

ದೇಶದಲ್ಲಿ ಮೋದಿ ಸರ್ಕಾರ ರಚನೆ ಮುನ್ನ ಅನ್ಯ ದೇಶಗಳಿಗೆ ಭಾರತವನ್ನು ಹೊಲಿಕೆ ಮಾಡುವ ವಾಡಿಕೆ ಇತ್ತು. ಆದರೆ ಮೋದಿ ಸರ್ಕಾರ ಅಧಿಕಾರದ ದಿನದಲ್ಲಿ ಭಾರತವನ್ನು ಇತರ ದೇಶಗಳಿಗೆ ಹೊಲಿಕೆ ಮಾಡುತ್ತಿದ್ದಾರೆ. 70ವರ್ಷ ದೇಶವನ್ನು ಆಳ್ವಿಕೆ ನಡೆಸಿದ ಕಾಂಗ್ರೆಸ್ ದೇಶದ ಭವಿಷ್ಯವನ್ನು ನಾಶ ಮಾಡಿದೆ. ಈ ಹಿನ್ನಲೆಯಲ್ಲಿ ಜನತೆ ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ಮೋದಿ ಸರ್ಕಾರ ರಕ್ಷಣಾ ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಾಜ್ಞಾನ ಹಾಗೂ ಹೆಚ್ಚಿನ ಅನುದಾನ ನೀಡಿದ್ದು ದೇಶ ಸುಭದ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ ಮೋದಿ ಸರ್ಕಾರ ನಡೆಸಿದ ಕಾರ್ಯವೈಖರಿಗೆ ಇಡೀ ಜಗತ್ತು ಬೆರಗಾಗಿದೆ. ಭಾರತ ಅರ್ಥಿಕತೆ ಮತ್ತು ಸಾಮಾಜಿಕ ಸ್ಥಿತಿ-ಗತಿಗಳಿಗೆ ಸುಸ್ಥಿತಿ ಸರ್ಕಾರವೆಂದರೆ ಅದು ಬಿಜೆಪಿ ಸರ್ಕಾರವಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ‌ಬಸವರಾಜ‌ ಬೊಮ್ಮಾಯಿ ಮಾತನಾಡಿ ಬೇಲೂರಿನಲ್ಲಿ ಮುಂದಿನ ಚುನಾವಣೆಗೆ ಬದಲಾವಣೆ ಗಾಳಿ ಬೀಸಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಅಧಿಕಾರ ಹಿಡಿಯಲಿದೆ ಯಾವುದೇ ಅನುಮಾನವಿಲ್ಲ ದಶಕಗಳಿಂದ ಇದ್ದ ಸಮಸ್ಯೆ ಒಂದೊಂದಾಗಿ ಬಗೆ ಹರಿಯುತ್ತಿದೆ. ಸಾವಿರಾರು ಕೋಟಿ ಅನುದಾನದಲ್ಲಿ ಪ್ರಗತಿ ಕಾಣುತ್ತಿದೆ.ಬಿಜೆಪಿ ಬೂತ್ ಮಟ್ಟದಿಂದ ಹಿಡಿದು ರಾಜ್ಯ ರಾಷ್ಟ್ರಮಟ್ಟದಲ್ಲೂ ಸಂಘಟನೆ ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ನೀರಾವರಿ ಶೈಕ್ಷಣಿಕ ಮತ್ತು ರಾಜ್ಯದ ಸಮಸ್ತ ಅಭಿವೃದ್ಧಿಯಾಗುತ್ತಿದೆ ಎಂದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳು ಇದ್ದರೂ ಬೇಲೂರು ತಾಲ್ಲೂಕಿಗೆ ನೀರಾವರಿಯಿಂದ ವಂಚಿಸಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಪಾದಯಾತ್ರೆ ನಡೆಸಿ, ತಾವುಗಳು ಸಿಎಂ ಆದ ಬಳಿಕ ಯಗಚಿ ಏತ ನೀರಾವರಿ ಮತ್ತು ಬಯಲು ಸೀಮಗೆ ಶಾಶ್ವತ ನೀರಾವರಿ ಕಲ್ಪಿಸುವ ರಣಘಟ್ಟ ಯೋಜನೆ ನೀಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ಈ ಬಾರಿ ಬೇಲೂರಿನಲ್ಲಿ ಶತಾಯ-ಗತಾಯ ಕಮಲ ಅರಳುವುದು ಖಚಿತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಬಿಜೆಪಿ ಮುಖಂಡರಾದ ಸಿದ್ದೇಶನಾಗೇಂದ್ರ, ಸುರಭಿರಘು, ರೇಣುಕುಮಾರ್, ಸಂತೋಷ್ ಕೆಂಚಾಬ, ಅಧ್ಯಕ್ಷ ಅಡಗೂರು ಆನಂದ್, ಜೆ.ಕೆ.ಕುಮಾರ್, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಪರ್ವತಯ್ಯ, ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು