News Karnataka Kannada
Tuesday, May 07 2024
ಹಾಸನ

ಆಲೂರು: ನಳಂದ ಬುದ್ಧ ವಿಹಾರ ಉದ್ಘಾಟನೆ

Alur: Nalanda Buddha Vihar inaugurated
Photo Credit : News Kannada

ಆಲೂರು: ತಾಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೇಡಚವಳ್ಳಿ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಾಣವಾದ ನಳಂದ ಬುದ್ಧ ವಿಹಾರ ಉದ್ಘಾಟನೆಯನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ರವರು ಹಾಗೂ ಬಂತೇಜಿ ಬೋದಿದತ್ತ ನಳಂದ ವಿಶ್ವವಿದ್ಯಾಲಯ ಚಾಮರಾಜನಗರ ಮತ್ತು ಬಂತೆ ಬೋಧಿ ಪ್ರಜ್ಞಾನಂದ ಸಿರಿಧಾಮ ಚಾರಿಟೇಬಲ್ ಟ್ರಸ್ಟ್ ಕೊಳ್ಳೇಗಾಲ ರವರು ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟಿಸಿದರು.

ನಂತರ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ ನಾವು ಬುದ್ಧ ಅನುಯಾಯಿಗಳ ಜೊತೆಗೆ ಬುದ್ಧ ಮಾರ್ಗದಲ್ಲಿ ನಡೆಯಬೇಕಾಗಿದೆ ಇವತ್ತಿನ ಸನ್ನಿವೇಶ ಪ್ರಪಂಚದಲ್ಲಿ ದುಃಖ ಹೆಚ್ಚಿದಿಯೋ..ಅಥವಾ ಸುಖ ಹೆಚ್ಚಿದಿಯೋ. ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವ ಆಗುತ್ತದೆ.

ಹೆಚ್ಚಿನ ಅಂಶ ದುಃಖನೆ ಹೆಚ್ಚು ಎಂದು ನಾನು ಭಾವಿಸುತ್ತೇನೆ ಯಾಕೆಂದರೆ ಅತಿ ಆಸೆಯಿಂದ ದುಃಖ ಇರುತ್ತದೆ ದ್ವೇಷದಿಂದ ದುಃಖ ಇರುತ್ತದೆ ಕತ್ತಲು ಇರುವಂತ ಸ್ಥಳದಲ್ಲಿ ದುಃಖ ಇರುತ್ತದೆ ಆದ್ದರಿಂದ ನಾವೆಲ್ಲರೂ ಕೂಡ ಧರ್ಮಧಾರಿತವಾಗಿ ಹಾಗೂ ಜಾತಿ ಆಧಾರಿತವಾಗಿ ಬಂದಿದ್ದೇವೆ ಭಗವಾನ್ ಬುದ್ಧ, ಬಸವಣ್ಣ, ಅಂಬೇಡ್ಕರ್ ರಂತಹ ಮಾರ್ಗದರ್ಶನದಲ್ಲಿ ನಡೆದರೂ ಕೂಡ ನಾವು ಇದರಿಂದ ವಿಮೋಚನೆ ಹೊಂದಿಲ್ಲ ಬುದ್ಧ ಕೊಟ್ಟಂತ ಬೆಳಕು ಧ್ವನಿ ಪ್ರೀತಿ ಇವುಗಳ ನಡುವೆ ನಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯ ಎಂದರು.

ನಂತರ ದಮ್ಮ ಪ್ರವಚನ ಪಂಚಶೀಲಗಳನ್ನು ಬೋಧಿಸಿ ದ ನಂತರ ಬಂತೇಜಿ ಭಂತೆ ಬೋದಿದತ್ತ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಚಾಮ ರಾಜನಗರ ರವರು ಮಾತನಾಡಿ ಭಗವಾನ್ ಬುದ್ಧರಿಗು ಕಪೋ ಕಲ್ಪಿತ ದೇವರುಗಳಿಗೂ ೭೩ ರೀತಿಯ ವಿಶೇಷ ಶಕ್ತಿಗಳ ವ್ಯತ್ಯಾಸವಿದೆ ಅದರಲ್ಲಿ ಮಹಾಕರುಣಾಸಮಭಕ್ತಿ ಬುದ್ಧರು ಒಂದು ಗಂಟೆ ಮಾತ್ರ ನಿದ್ರೆ ಮಾಡುತ್ತಿದ್ದು ಬೆಳಗಿನ ಜಾವ ಮೂರು ಗಂಟೆ ನಂತರ ಪ್ರಜ್ಞಾತವಾಗಿ ವಿಶ್ರಾಂತಿ ಪಡೆಯುತ್ತಿದ್ದರು ಭಗವಾನ್ ಬುದ್ಧರಿಗು ಇತರೆ ಗುರುಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ ಇಡೀ ಜಗತ್ತಿನಲ್ಲಿ ಬುದ್ಧರನ್ನು ಬಿಟ್ಟರೆ ಬೇರೆ ಎಲ್ಲಾ ಗುರುಗಳು ಶ್ರೀಮಂತರನ್ನು ರಾಜರನ್ನು ಹುಡುಕಿಕೊಂಡು ಹೋಗುತ್ತಿದ್ದರು ಆದರೆ ಬುದ್ಧರು ಮಾತ್ರ ಕೊಳಚೆ ಕೇರಿಗಳಲ್ಲಿ ದೀನದಲಿತರನ್ನು ಬಡವರ ಮನೆಗೆ ಹೋಗುತ್ತಿದ್ದರು. ಭಗವಾನ್ ಬುದ್ಧರ ತತ್ವ ಸಿದ್ಧಾಂತ ಪ್ರತಿಯೊಬ್ಬರು ಪಾಲಿಸಿಕೊಂಡು ಹೋಗುವುದರಿಂದ ಮುಕ್ತಿ ಸಿಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು ಸಾಹಿತಿಗಳಾದ ಕೆ ಬಿ ಗುರುಮೂರ್ತಿ ವಹಿಸಿದರು.ಕಾರ್ಯಕ್ರಮದಲ್ಲಿ ಮಹಾಬೂದಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಶಿವಾನಂದ್ ಮಹಾ ನಾಯಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಪ. ಪಂಚಾಯಿತಿ ಮಂಜುನಾಥ್ ಮಾತನಾಡಿದರು. ಚಂಚಲ ಕುಮಾರಸ್ವಾಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು , ರಘು ಬೇಡಚವಳ್ಳಿ ಕೆಎಎಸ್, ಪಟ್ಟಣ ಪಂಚಾಯಿತಿ ಸದಸ್ಯ ಧರ್ಮ,ಇಂದಿರಾ ಬಹುದ್ದೂರ್, ಡಾ. ಪತ್ನಿ ಕೃಷ್ಣಯ್ಯ ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರ ಹಾಸನ, ಶಶಿಧರ್ ಮೌರ್ಯ ಗಾಂಧಾರ ಬುದ್ಧ ವಿಹಾರ ಮದಘಟ್ಟ, ಅಜ್ಜೇನಳ್ಳಿ ರಂಗಯ್ಯ, ಬಸವರಾಜು ಡಿಎಸ್‌ಎಸ್, ಶಿಕ್ಷಕರಾದ ಹರಿಂದ್ರ, ವೇಣು ಲುಂಬಿನಿಬುದ್ಧ ವಿಹಾರ ಸಕಲೇಶಪುರ, ಯೋಗೇಶ್ ವಕೀಲರು ಮೈತ್ರೆಯ ಬುದ್ಧ ವಿಹಾರ ಮಲೆದೇವಪುರ, ಸ್ಟೀವನ್ ಪ್ರಕಾಶ್ ಕಾನಿಷ್ಕ ಚಾರಿಟೇಬಲ್ ಟ್ರಸ್ಟ್, ರಘು, ರಂಗನಾಥ್,ಸಿದ್ದೇಶ್ ಶಿವರಾಜ್ ಸಾಕ್ಯ, ಮೋಹನ್ ಕಾಡ್ಲೂರು, ಬೇಡಚವಳ್ಳಿ ಗ್ರಾಮದ ರವಿ ರಂಗನಾಥ್, ಲೋಕೇಶ್ ಆರೋಗ್ಯ ಇಲಾಖೆ, ಮನು, ಮಧು, ವಸಂತ, ಜಯಣ್ಣ, ಜಯರಾಜ್,ನಾಗೇಶ್,ಈಶ್ವರ್,ಶಿವಣ್ಣ, ಪುಟ್ಟರಾಜು ಭಾವಸವಳ್ಳಿ ,ಚನ್ನವೀರ ,ವೆಂಕಟೇಶ್ ಉಪಾಧ್ಯಾಯ ,ಅಣ್ಣಪ್ಪ ಹೇರಳಲೆ, ಮೋಹನ್ ಕಿತ್ತೆಗೆರೆ, ರವಿ ಬೇಡಚವಳ್ಳಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು