News Karnataka Kannada
Thursday, May 02 2024
ಮೈಸೂರು

ಗೊಂಬೆ ಮನೆ ಸುದ್ದಿಗೆ ಪ್ರಾಮುಖ್ಯತೆ ನೀಡಿ: ಸುಧಾ ಬರಗೂರು

Give importance to doll house news: Sudha Baragur
Photo Credit : News Kannada

ಮೈಸೂರು: ಯಾವುದೋ ಸುದ್ದಿಗಳನ್ನು ಮೂರುದಿನಗಳ ಕಾಲ ಪ್ರಚಾರ ಮಾಡುವ ಬದಲು ನಮ್ಮ ಇತಿಹಾಸ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಗೊಂಬೆ ಜೋಡಣೆಯಂತಹ ಗೊಂಬೆ ಮನೆ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಪ್ರಸಿದ್ದ ಹಾಸ್ಯಗಾರ್ತಿ ಸುಧಾ ಬರಗೂರು ಹೇಳಿದರು.

ಮೈಸೂರು ದಸರಾ ಹಬ್ಬದ ಅಂಗವಾಗಿ ಕೆಎಂಪಿ ಕೆ ಟ್ರಸ್ಟ್ ಆಯೋಜಿಸಿರುವ ಮನೆ ಮನೆ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ನಂಜು ಮಳಿಗೆಯಲ್ಲಿರುವ ಸೌಮ್ಯಲಕ್ಷ್ಮಿ ಸತ್ಯನಾರಾಯಣ ಅವರ ನಿವಾಸಕ್ಕೆ ಭೇಟಿ ನೀಡಿ ಗೊಂಬೆ ಜೋಡಣೆ ವೀಕ್ಷಿಸಿ ಮಾತನಾಡಿದರು.

ನಮ್ಮ ಇತಿಹಾಸವನ್ನ ಗೊಂಬೆಗಳ ಮೂಲಕ ಸೌಮ್ಯಲಕ್ಷ್ಮೀ ಕಟ್ಟಿಕೊಟ್ಟಿದ್ದಾರೆ. ಇದನ್ನು ಉಳಿಸಿ ಬೆಳೆಸಬೇಕಿದೆ. ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯವಿದೆ ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ನಮ್ಮ ಇತಿಹಾಸವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ, ಈ ಗೊಂಬೆ ಮನೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ಇದೊಂದು ಅದ್ಭುತ ಕಲೆ. ಇದೆಲ್ಲಾ ಮುಂದಿನ ಜನಾಂಗಕ್ಕೆ ತಿಳಿಯಬೇಕು ಇದಕ್ಕೆ ಎಲ್ಲರ ಸಹಕಾರ ಬೇಕು. ಬಳೆ, ಬಿಂದಿ, ಸೀರೆ, ಒಡವೆ ಸಂಗ್ರಹ ಮಾಡುವುದು‌ ಹೆಣ್ಣು ಮಕ್ಕಳಿಗೆ ಒಂದು ಕ್ರೇಜ್ ಆಗಿರುತ್ತದೆ.

ಹಿಂದೆ ನಾವು ಚಿಕ್ಕವರಾಗಿದ್ದಾಗ ಪುಟ್ಟ ಗೊಂಬೆಗಳನ್ನು ಜೋಡಿಸಿದ್ದನ್ನ ನೋಡಿದ್ದೆ. ಕಬ್ಬಿಣದ ಪುಟ್ಟ ಪೆಟ್ಟಿಗೆಯನ್ನು ಗೊಂಬೆ ಹಬ್ಬದಲ್ಲಿ ಕೆಳಗಿಳಿಸುತ್ತಿದ್ದರು. ಸಿಬಾಕಾ, ಬಿನಾಕಾ ಪೇಸ್ಟ್ ಬರುತ್ತಿತ್ತು ಅದರಲ್ಲಿ ಪುಟ್ಟ ಗೊಂಬೆಗಳು ಇರುತ್ತಿತ್ತು ಅವುಗಳನ್ನು ಜೋಡಿಸಿ ಆನಂದಿಸುತ್ತಿದ್ದೆವು ಎಂದು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡರು.

ಇಡೀ ದಸರಾ ಪರಿಕಲ್ಪನೆಯನ್ನು ಸೌಮ್ಯ‌ ಅವರು ಇಪ್ಪತ್ತು ವರ್ಷಗಳ ಶ್ರಮ ದಿಂದ ಮಾಡಿದ್ದಾರೆ, ಪೌರಾಣಿಕ ಕಥೆಗಳು, ದೇವಸ್ಥಾನ, ಅದರ ಅರ್ಚಕರು ಹೊರಬರುವುದು ಹೀಗೆ ಪ್ರತಿಯೊಂದನ್ನೂ ಗೊಂಬೆ ಮೂಲಕ ಮೈಸೂರಿನ ಸೌಮ್ಯಲಕ್ಷ್ಮಿ ಗೊಂಬೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಅದಕ್ಕೆ ಅವರನ್ನ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದರಲ್ಲದೆ, ಅರಮನೆ, ಝೂ, ಕೆಆರ್ ಎಸ್ ನೋಡೋರು ಮರೆಯದೆ ಈ ಗೊಂಬೆಮನೆಗೂ ಭೇಟಿ ಕೊಡಿ ಎಂದು ಅವರು ಮನವಿ ಮಾಡಿದರು.

ಈ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಆರ್ ಎಚ್ ಪವಿತ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ , ಅಜಯ್ ಶಾಸ್ತ್ರಿ, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನವೀನ್ ಕೆಂಪಿ, ಮಿರ್ಲೆ ಪನಿಷ್, ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು