Bengaluru 24°C
Ad

ನಂಜನಗೂಡು: ಕಾರ್ಖಾನೆಯ ರಾಸಾಯನಿಕಯುಕ್ತ ನೀರಿಗೆ ಬೇಸತ್ತ ರೈತರು

ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತಾಯೂರು ಗ್ರಾಮದಲ್ಲಿ ಶ್ರೀ ಗ್ಲೂಕೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ರಾಸಾಯನಿಕ ಯುಕ್ತ ನೀರನ್ನು ರೈತರ ಜಮೀನು ಮತ್ತು ಕಾಲುವೆಗೆ ಹರಿಸುತ್ತಿರುವ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂಜನಗೂಡು: ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತಾಯೂರು ಗ್ರಾಮದಲ್ಲಿ ಶ್ರೀ ಗ್ಲೂಕೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ರಾಸಾಯನಿಕ ಯುಕ್ತ ನೀರನ್ನು ರೈತರ ಜಮೀನು ಮತ್ತು ಕಾಲುವೆಗೆ ಹರಿಸುತ್ತಿರುವ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ರಾಸಾಯನಿಕಯುಕ್ತ ನೀರಿಗೆ ರೈತರು ಬೇಸತ್ತು ಹೋಗಿದ್ದಾರೆ. ಜನ-ಜಾನುವಾರುಗಳು ಸತ್ತರೆ ಕಾರ್ಖಾನೆಯ ಮಾಲೀಕರೆ ನೇರ ಹೊಣೆ ಎಂದು ರೈತರು ಕಾರ್ಖಾನೆಯ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಯೂರು ಗ್ರಾಮದಲ್ಲಿರುವ ಶ್ರೀ ಗ್ಲೂಕೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ರಸಾಯನಿಕಯುಕ್ತ ನೀರನ್ನು ರೈತರ ಜಮೀನು ಮತ್ತು ಕಾಲುವೆಗೆ ಹರಿಸಲಾಗುತ್ತಿದೆ. ಇದರಿಂದ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾರ್ಖಾನೆಯ ವಿಷಯುಕ್ತ ನೀರಿಗೆ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ‌. ಕಳೆದ ಹತ್ತು ವರ್ಷಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿದರೂ ಕಾರ್ಖಾನೆಯ ಮಾಲೀಕರು ಕ್ಯಾರೇ ಎನ್ನುತ್ತಿಲ್ಲ. ಕಾರ್ಖಾನೆಯ ಕಲುಷಿತ ನೀರಿನಿಂದ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.

Ad
Ad
Nk Channel Final 21 09 2023
Ad