Bengaluru 25°C
Ad

ದರ್ಶನ್‌ ಊಟಕ್ಕೆ ಕರೆದಿದ್ದರು ನಾನು ಹೋಗಿದ್ದೆ ಎಂದು ಪೊಲೀಸರಲ್ಲಿ ಹೇಳಿದ ಚಿಕ್ಕಣ್ಣ

ರೇಣುಕಾಸ್ವಾಮಿ  ಕೊಲೆ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ಪ್ರಕರಣ ಸಂಬಂಧ ಇಂದು ಹಾಸ್ಯನಟ ಚಿಕ್ಕಣ್ಣ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ  ಕೊಲೆ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ಪ್ರಕರಣ ಸಂಬಂಧ ಇಂದು ಹಾಸ್ಯನಟ ಚಿಕ್ಕಣ್ಣ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Ad
300x250 2

ಸ್ಟೋನಿ ಬ್ರೂಕ್ ಗೆ ಹೋಗಿದ್ದ ಬಗ್ಗೆ ವಿಚಾರಣೆಯ ವೇಳೆ, ನನ್ನನ್ನು ದರ್ಶನ್‌ ಅವರು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟಕ್ಕೆ ಹೋಗಿದ್ದೇನೆ. ಇದು ಬಿಟ್ಟು ಬೇರೆ ಯಾವುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿದ್ದಾರೆ.

ಊಟ ಮಾಡಿಕೊಂಡು ನಾನು ಅಲ್ಲಿಂದ ಹೊರಟೆ. ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಬಗ್ಗೆ ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಟಿವಿಗಳಲ್ಲಿ ಬಂದ ಮೇಲೆಯೇ ನಂಗೆ ಈ ವಿಚಾರದ ಬಗ್ಗೆ ಗೊತ್ತಾಯ್ತು. ಹೀಗಾಗಿ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಸ್ಟೋನಿ ಬ್ರೂಕ್‌ಗೆ ಪೊಲೀಸರು ಸ್ಥಳ ಮಹಜರಿಗೆ ತೆರಳಿದ್ದಾಗ ಚಿಕ್ಕಣ್ಣ ಅಲ್ಲಿದ್ದರು. ಹೀಗಾಗಿ ಪೊಲೀಸರು ಹಾಸ್ಯನಟನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಕರೆತಂದು ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

Ad
Ad
Nk Channel Final 21 09 2023
Ad