Bengaluru 27°C
Ad

ಬೆಳೆ‌ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ರೈತ ಕಲ್ಯಾಣ ತಂಡ

ಸರಗೂರು ತಾಲೂಕಿನ ಮಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದರಲ್ಲದೆ, ಎನ್ ಡಿ ಆರ್ ಎಫ್ ಮಾರ್ಗಸೂಚಿಯ ನೀತಿ ನಿಯಮದಂತೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರು: ಸರಗೂರು ತಾಲೂಕಿನ ಮಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದರಲ್ಲದೆ, ಎನ್ ಡಿ ಆರ್ ಎಫ್ ಮಾರ್ಗಸೂಚಿಯ ನೀತಿ ನಿಯಮದಂತೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಲೂಕಿನ ನೂರಾರು ಎಕರೆ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಈ ಪ್ರದೇಶಗಳಿಗೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಸಂಘದ ಪದಾಧಿಕಾರಿಗಳೊಂದಿಗೆ ಜಮೀನಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ರೈತರ ಸಂಕಷ್ಟ  ಆಲಿಸಿದರು. ಬಳಿಕ ಮಾತನಾಡಿದ ಅವರು, ಸರಗೂರು ತಾಲೂಕಿನ ಹೀರೆಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಶುಂಠಿ, ತಂಬಾಕು, ಹತ್ತಿ ಹಾಗೂ ಮೆಣಸಿ ಬೆಳೆಗಳು ನಾಶವಾಗಿದೆ.

ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟ ಸೂಚ್ಯಂಕ ಆಧಾರದ ಮೇರೆಗೆ ಮತ್ತು ಎನ್ ಡಿ ಆರ್ ಎಫ್ ಮಾರ್ಗಸೂಚಿಯ ನೀತಿ ನಿಯಮದಂತೆ ಪರಿಹಾರ ಒದಗಿಸಿಕೊಡುವಲ್ಲಿ ಮುಂದಾಗಬೇಕೆಂದು ಗೌರವಪೂರ್ವಕವಾಗಿ ಚಂದನ್ ಗೌಡ ಮನವಿ‌ ಮಾಡಿದರು.

ಈಗಾಗಲೇ ಮೈಸೂರು ಜಿಲ್ಲೆಯಾದ್ಯಂತ ನಿರಂತರವಾಗಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಜಿಲ್ಲಾ ವ್ಯಾಪ್ತಿಯ ಹೆಚ್.ಡಿ.ಕೋಟೆ, ಸರಗೂರು, ಹುಣಸೂರು ಸೇರಿದಂತೆ ಹಲವು ಭಾಗಗಳಲ್ಲಿ ಸಾವಿರಾರು ಎಕರೆಗಳಷ್ಟು ಬೆಳಗಳು‌ ನಾಶವಾಗಿದೆ. ಅಂತೆಯೇ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಸರಗೂರು ತಾಲೂಕಿನ ಹೀರೆಹಳ್ಳಿ ಗ್ರಾಮದಲ್ಲೂ ಕೂಡಾ ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಹಾನಿಯಾಗಿವೆ. ಇದರಿಂದಾಗಿ ಅನ್ನದಾತರು ಇದೀಗ ಕಂಗಾಲಾಗಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ರೈತರಿಗೆ ಸಾಂತ್ವನ ಹೇಳಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಕಲ್ಯಾಣದ ಪದಾಧಿಕಾರಿಗಳಾದ ಹೇಮಂತ್ ಗೌಡ, ಹರೀಶ್ ಗೌಡ, ಸಂಜಯ್, ಪ್ರತಾಪ್, ಉಮೇಶ್, ಮಂಚಯ್ಯ, ರಾಜೇಶ್, ರಾಜು, ದಾಸೇಗೌಡ ಇನ್ನಿತರ ರೈತ ಸಂಘಟನೆಯವರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Ad
Ad
Nk Channel Final 21 09 2023
Ad