ಮೈಸೂರು: ಯತೀಂದ್ರ ವಸೂಲಿ ಮಾಡ್ತಿದ್ದಾರೆ ಎಂಬ ಹೆಚ್‌ ಡಿಕೆ ಆರೋಪ ವಿಚಾರವಾಗಿ ಹೆಚ್‌ ಡಿಕೆ ಹೇಳಿಕೆಗೆ ಮೈಸೂರಿನಲ್ಲಿ ಡಾ‌. ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವ್ರ ಮನೆಯವ್ರು ಎಲ್ಲರೂ ವಸೂಲಿಗೆ ನಿಂತಿದ್ರು ಅಂತಾ ನಾನೂ ಹೆಳ್ತೀನಿ. ಕುಮಾರಸ್ವಾಮಿ ಬಳಿ ಯಾವುದು ದಾಖಲೆ ಇಲ್ಲ. ಆರೋಪ ಮಾಡೋಕೆ ಏನೂ ಹೀಗಾಗಿ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯ ಕಣ್ಣೀರು ಹಾಕಿದ್ರು ಅನ್ನೋ ಕುಮಾರಸ್ವಾಮಿ ಹೇಳಿಕೆ ಎಂದರು.

ನಮ್ಮ ತಂದೆಯವ್ರು ರಾಜಕಾರಣದಲ್ಲಿ ಸೋಲು ಗೆಲುವು ಎರಡನ್ನೂ ಕಂಡವ್ರು, ಹೀಗಾಗಿ ಕಣ್ಣೀರು ಹಾಕೋ ಅವಶ್ಯಕತೆ ಅವ್ರಿಗೆ ಏನಿದೆ. ನಮ್ಮ ತಂದೆ ಮುಖ್ಯಮಂತ್ರಿ ಆಗಿರೋ ವರೆಗೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕೆ ಎಲ್ಲರೂ ಆಕಾಂಕ್ಷಿ ಇರ್ತಾರೆ. ಹೈ ಕಮಾಂಡ್ ಯಾರು ಸಚಿವ್ರಾಗಬೇಕು ಅನ್ನೋದನ್ನ ತಿರ್ಮಾನ ಮಾಡಲಿದೆ ಎಂದು ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.