News Karnataka Kannada
Monday, April 29 2024
ಮೈಸೂರು

ಸರಗೂರಿನಲ್ಲಿ ದರ್ಶನ್ ಧ್ರುವನಾರಾಯಣ್ ಮತಯಾಚನೆ

Darshan Dhruvanarayan seeks votes in Saragur
Photo Credit : By Author

 

ಸರಗೂರು: ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಅವರು ಸರಗೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಇದೇ ವೇಳೆ  ನಡೆದ ಕಾಂಗ್ರೆಸ್ ನ ಬೃಹತ್ ಮೆರವಣಿಗೆಯಲ್ಲಿ ಸರಗೂರಿನ ಕಾಂಗ್ರೆಸ್ ಪಕ್ಷದ ವತಿಯಿಂದ ಜೆಸಿಬಿಯಲ್ಲಿ ಹೂವಿನಹಾರ ಹಾಕಿ, ಹಾಗೂ ಬಿಡಿ ಹೂಗಳಿಂದ ದರ್ಶನ್ ಧ್ರುವನಾರಾಯಣ್, ಶಾಸಕ ಅನಿಲ್  ಚಿಕ್ಕಮಾದು, ಪಕ್ಷದ ಕಾರ್ಯಕರ್ತರುಗಳ ಮೇಲೆ ಹೂವಿನ ಮಳೆ ಸುರಿಸಿ ಮೈಸೂರು ಪೇಟೆ ಶಾಲು ಹಾಕಿ ಸನ್ಮಾನಿಸಿ, ಅದ್ಧೂರಿ ಸ್ವಾಗತ ನೀಡಿದರು.

ಸರಗೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಪಿ ರವಿ ರವರ ತೋಟದ ಮನೆಯಲ್ಲಿ ನಡೆದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ  ದರ್ಶನ್ ಧ್ರುವ ನಾರಾಯಣ್ ಮಾತನಾಡಿ, ನಾನು ಒಬ್ಬ ವಕೀಲರ ವೃತ್ತಿ ಮಾಡಿಕೊಂಡು ಇದ್ದವನು. ನಮ್ಮ ತಂದೆಯವರ ಹಾದಿಯಲ್ಲಿ ನಡೆದು ಅವರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದೇನೆ. ನಮ್ಮ ತಂದೆಯವರು ಮಾಡಿದಂತಹ ಕೆಲಸ ಕಾರ್ಯಗಳನ್ನು ಮನಗಂಡು ಹಾಗೂ ಅವರು ಸಂಸತ್ತಿನಲ್ಲಿ ಒಬ್ಬ ಉತ್ತಮ ಸಂಸದರೆಂದು ಹೆಸರು ಪಡೆದಿದ್ದರು.

ಇಲ್ಲಿನ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದು  ನಮ್ಮ ತಂದೆ ಉತ್ತಮ ಸಂಸದರೆಂದು  ಹೆಸರುಗಳಿಸಿದ್ದಾರೆ ಎಂದರಲ್ಲದೆ, ಶಾಸಕರಾದ ಅನಿಲ್ ಚಿಕ್ಕಮಾದು ರವರಿಗೆ ಮತನೀಡಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಭಾಗದ ಜನರ ನೋವಿಗೆ ಸ್ಪಂದಿಸಿದ್ದು, ಇಲ್ಲಿನ ಗ್ರಾಮಗಳಿಗೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ. ಮುಂದೆಯೂ ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಮನವಿ ಮಾಡಿದರು.

ಸರಗೂರು ತಾಲ್ಲೂಕಿನ ಸರಗೂರು ಟೌನ್, ನರಸೀಪುರ, ಹಳೆಯೂರು, ಹಳೆಹೆಗ್ಗುಡಿಲು,ಬೆದ್ದಲಪುರ, ದಡದಹಳ್ಳಿ,  ಹುಳ್ಳೇಮಾಳ, ದೇವಲಾಪುರ, ಕಲ್ಲಳ್ಳ, ಬಾಡಿಗ, ಗದ್ದೆಹುಂಡಿ, ಬಿ ಮಟಕೆರೆ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚನೆ ಮಾಡಲಾಯಿತು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ  ಪಿ ರವಿ, ಕೆ ಚಿಕ್ಕವೀರನಾಯ್ಕ, ಎಚ್ ಸಿ  ನರಸಿಂಹಮರ‍್ತಿ, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು, ಸರಗೂರು ಟೌನ್ ಅಧ್ಯಕ್ಷ ಎಸ್ಎನ್ ನಾಗರಾಜು, ಪ್ರಭುಸ್ವಾಮಿ, ಕಾಂಗ್ರೆಸ್ ಮುಖಂಡ ಮನುಗನಹಳ್ಳಿ ಗುರುಸ್ವಾಮಿ, ಹೆಚ್ ಸಿ ಮಂಜುನಾಥ್, ಗದ್ದೆಹುಂಡಿ ಗುಣಪಾಲ್, ಶಂಭುಲಿಂಗನಾಯಕ,   ಹೂವಿನಕೊಳ ಸಿದ್ದರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ವಿಎಸ್ಎಸ್ ಅಧ್ಯಕ್ಷ ಡಿ.ಪಿ.ನಟರಾಜ್, ಪುರದಕಟ್ಟೆಬಸವರಾಜು , ಭಾಗ್ಯಲಕ್ಷ್ಮಿ,  ಮಾಜಿ ಅಧ್ಯಕ್ಷ ಮಂಜುನಾಥ್, ಪಪಂ ಸದಸ್ಯ ಶ್ರೀನಿವಾಸ, ಚೆಲುವಕೃಷ್ಣ, ಮಾಜಿ ಪಪಂ ನಾಗಯ್ಯ, ಶಂಭು, ಉಯ್ಯಂಬಳ್ಳಿ  ನಾಗರಾಜು, ನಂದಿನಾಥಪುರ ಮಣಿ, ಕಲ್ಲಹಳ್ಳ ಅಭಿಕುಮಾರ್, ವಿಜಯೇಂದ್ರ, ಚನ್ನಿಪುರ ನಾಗರಾಜು, ಅಗತ್ತೂರು ನಂಜಯ್ಯ, ಸಾಗರೆ ಸೋಮಣ್ಣ, ಅಡಹಳ್ಳಿ ಮಂಜು, ರಮೇಶ್, ನವೀನ್, ಸರ‍್ಯ, ಕರ‍್ತಿ, ಸುಭಾನ್, ಜಲೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು