News Karnataka Kannada
Friday, May 17 2024
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಕಡವೆ ಬೇಟೆಗೆ ಬಂದಾತ ಅರಣ್ಯಾಧಿಕಾರಿಗಳ ಗುಂಡಿಗೆ ಬಲಿ

Man shot dead by forest officials in Gundlupet
Photo Credit : News Kannada

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ರೇಂಜ್ ಬಳಿ ಬೇಟೆಗಾರನ ಮೇಲೆ ಅರಣ್ಯಾಧಿಕಾರಿ ಫೈರಿಂಗ್ ಮಾಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭೀಮನಬೀಡು ಗ್ರಾಮದ ನಿವಾಸಿ ಮನೋಜ್‌ (23) ಗುಂಡಿನ ದಾಳಿಗೆ ಬಲಿಯಾದ ಬೇಟೆಗಾರ. 10 ಬೇಟೆಗಾರರ ತಂಡ ತಡರಾತ್ರಿ ಕಡವೆ ಬೇಟೆಯಾಡಲು ಬಂದಿದ್ದರು. ಬೇಟೆಗಾರರು ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿ ಕೊಂಡೊಯ್ಯುತ್ತಿದ್ದರು.

ಈ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೇಟೆಗಾರರನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಬೇಟೆಗಾರರು ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಅರಣ್ಯಾಧಿಕಾರಿ ಆತ್ಮರಕ್ಷಣೆಗಾಗಿ ಬೇಟೆಗಾರರ ಮೇಲೆ ಫೈರಿಂಗ್ ಮಾಡಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ. ಮೃತಪಟ್ಟ ಮಹೇಶ್‌ಗೆ ವಿವಾಹವಾಗಿ ಒಂದು ವರ್ಷವಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು