News Karnataka Kannada
Thursday, May 02 2024
ಚಾಮರಾಜನಗರ

ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನ: ಪೊಲೀಸರಿಂದ ಕಾರ್ಯಕರ್ತರ ಬಂಧನ, ಬಿಡುಗಡೆ

Congress workers detained by police for attempting to storm office By Pti .
Photo Credit : News Kannada

ಗುಂಡ್ಲುಪೇಟೆ: ದೇಶ ವಿಭಜನೆಯ ಹೇಳಿಕೆ ನೀಡಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿಕೆ ಸುರೇಶ್ ರವರ ವಿರುದ್ಧ ಇಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು KSRTC ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಡಿ ಕೆ ಸುರೇಶ್ ಪ್ರತಿಕೃತಿ ದಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ದೇಶ ವಿಭಜನೆ ಎಂಬ ಪಿಡುಗು ಕಾಂಗ್ರೆಸ್ಸ್ ನವರ ಡಿಎನ್ಎ ದಲ್ಲೇ ಬಂದಿದೆ,ಸ್ವಾತಂತ್ರದ ದಿನದಿಂದಲೂ ದೇಶವನ್ನ ಹೊಡೆದು ಆಳುವ ನೀತಿಯನ್ನ ಕಾಂಗ್ರೆಸ್ಸ್ ನವರು ಮಾಡಿಕೊಂಡು ಬಂದಿದ್ದಾರೆ ಇದರ ಮುಂದುವರೆದ ಭಾಗವಾಗಿ ಇಂದಿನ ಕಾಂಗ್ರೆಸ್ಸ್ ನವರು ನಡೆದುಕೊಳ್ಳುತ್ತಿದ್ದಾರೆ.

ಇಂತಹ ಹೇಳಿಕೆ ಕೊಡಲು ಡಿ ಕೆ ಸುರೇಶ್ ರವರಿಗೆ ನಾಚಿಕೆಯಾಗಬೇಕು ಹಾಗು ಇವರ ಹೇಳಿಕೆ ಗಳನ್ನ ಸಮರ್ಥನೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ಸ್ ನಾಯಕರುಗಳ ವರ್ತನೆಯು ಅದೇ ರೀತಿಯಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಡಿ ಕೆ ಸುರೇಶ್ ರವರನ್ನ ಸಂಸತ್ ಸದ್ಯಸ್ಯ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹ ಆಗ್ರಹಿಸಿದರು.

ಪ್ರತಿಭಟನೆ ನಂತರ ಗುಂಡ್ಲುಪೇಟೆ ತಾಲೂಕು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ಕಾರ್ಯಕರ್ತರುಗಳನ್ನು ಪೊಲೀಸರು ಬಂದಿಸಿ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು