News Karnataka Kannada
Friday, May 17 2024
ಚಾಮರಾಜನಗರ

ಚಾಮರಾಜನಗರ: ಸಂಸತ್ ಭವನಕ್ಕೆ ಅನುಭವ ಮಂಟಪ ಹೆಸರಿಡಲು ವಾಟಾಳ್ ಆಗ್ರಹ

Chamarajanagar: Vatal demands renaming of Parliament House after Anubhava MandapamChamarajanagar: Vatal demands renaming of Parliament House after Anubhava Mandapam
Photo Credit : By Author

ಚಾಮರಾಜನಗರ: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು, ಭವನದ ಮುಂಭಾಗ ಬಸವಣ್ಣ ಪ್ರತಿಮೆ ನಿರ್ಮಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ತಾಲೂಕಿನ ಮರಿಯಾಲ ಗ್ರಾಮದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಇಡೀ ವಿಶ್ವಾದ್ಯಂತ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಚುನಾವಣೆಗಾಗಿ ಎಲ್ಲ ಪಕ್ಷದವರು ಕೂಡ ಬಸವ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುವುದು ಸರಿಯಲ್ಲ. ಬಸವಣ್ಣನವರ ಬಗ್ಗೆ ಪ್ರಾಮಾಣಿಕ ಚಿಂತನೆಯಾಗಬೇಕು. ಅವರು ವಿಶ್ವಕ್ಕೆ ಮಾದರಿ. ಒಂದು ಸಂದೇಶವಾಗಿದ್ದಾರೆ. ಆದ್ದರಿಂದ ದೆಹಲಿಯಲ್ಲಿ ನೂತನ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು. ಭವನ ಮುಂಭಾಗ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದರು.

ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ವಿವಿಧ ಮಠಗಳ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನೂತನ ಸಂಸತ್ ಭವನ ಮುಂಭಾಗದಲ್ಲಿ ಬಸವೇಸ್ವರ ಪುತ್ಥಳಿ ನಿರ್ಮಾಣ ಹಾಗೂ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಸಮ್ಮೇಳನ ನಡೆಸಿ, ಕರ್ನಾಟಕ‌ ಬಂದ್ ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಕಿರಗಸೂರು, ಮೇಲಾಜಿಪುರ, ಪಣ್ಯದಹುಂಡಿ, ಮರಿಯಾಲ, ಯಲಕ್ಕೂರು ಇತರರ ಗ್ರಾಮಗಳಿಗೆ ತೆರಳಿ ಬಿರುಸಿನ ಮತಯಾಚಿಸಿದರು. ಈ ಸಂದರ್ಭದಲ್ಲಿ ಶಿವಲಿಂಗಮೂರ್ತಿ, ಪಾರ್ಥಸಾರಥಿ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು