ನಿಂಬೆ ಹಣ್ಣು ಹಲವಾರು ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಸಾಮಾನ್ಯವಾಗಿ ಜನರು ನಿಂಬೆ ಹಣ್ಣಿನ ಜ್ಯೂಸ್ ಅನ್ನು ಹೆಚ್ಚು ಸೇವನೆ ಮಾಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಜೊತೆಗೆ ಬೇಸಗೆ ಕಾಲದಲ್ಲಿ ದೇಹವನ್ನು ತಂಪಾಗಿಸಲು ನಿಂಬೆ ಹಣ್ಣಿನ ಜ್ಯೂಸ್ ತುಂಬಾನೆ ಸಹಕಾರಿಯಾಗಿದೆ. ಇದರ ಜೊತೆಗೆ ನಿಂಬೆ ಹಣ್ಣಿನ ಉಪ್ಪಿನಕಾಯಿ ಕೂಡ ಮಾಡಬಹುದು.
ನಿಂಬೆ ಹಣ್ಣಿನ ಉಪ್ಪಿನಕಾಯಿ ಮಾಡಲು ಮೊದಲು ನಿಂಬೆ ಹಣ್ಣನ್ನು ಸಣ್ಣ ಸಣ್ಣಗೆ ಕತ್ತರಿಸಿಕೊಂಡು ಇಡಿ. ನಂತರ ಮೆಂತ್ಯೆ ಹುರಿದಿಟ್ಟುಕೊಂಡು ಇದರೊಂದಿಗೆ ಸಾಸಿವೆ, ಅರಿಶಿಣ ಮತ್ತು ಮೆಣಸು ಅಥವ ಮೆಣಸಿನ ಪುಡಿ ಎಲ್ಲವನ್ನು ಬೆರೆಸಿ ಪುಡಿ ಮಾಡಿಕೊಳ್ಳಿ. ಸಣ್ಣಗೆ ಕತ್ತರಿಸಿಟ್ಟ ನಿಂಬೆ, ಉಪ್ಪು ಮತ್ತು ಸಿದ್ಧ ಪಡಿಸಿದ ಉಪ್ಪಿನಕಾಯಿ ಪುಡಿಯನ್ನು ಚೆನ್ನಾಗಿ ಬೆರೆಸಿ ನಂತರ ಎಳ್ಳೆಣ್ಣೆ ಕಾಯಿಸಿಕೊಂಡು ಅದಕ್ಕೆ ಇಂಗನ್ನು ಹಾಕಿ. ಆಮೇಲೆ ಸಣ್ಣಗೆ ಕತ್ತರಿಸಿ ನಿಂಬೆ ಹಣ್ಣಿನೊಂದಿಗೆ ಮಿಶ್ರಣ ಮಾಡಿ ತಂಬಿಸಿಡಿ. ನಂತರ ಗಂಜಿ ಊಟದ ಜೊತೆ ತಿನ್ನಿ.