ಹಿಮವದ್ ಗೋಪಾಲ ಸ್ವಾಮಿ- ಬಿಳಿಗಿರಿರಂಗನಬೆಟ್ಟದ ರಥೋತ್ಸವಕ್ಕೆ ಸಿದ್ಧತೆ

ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 28ರಂದು ಮತ್ತು ಬಿಳಿಗಿರಿರಂಗಬೆಟ್ಟದಲ್ಲಿ ಏಪ್ರಿಲ್ 16ರಂದು ರಥೋತ್ಸವ ನಡೆಯಲಿದ್ದು, ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿ, ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಧಿಕಾರಿಗಳ ಸಭೆ ನಡೆಸಿದ ಅವರು, ರಥೋತ್ಸವದ ವೇಳೆ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು, ಪ್ರಸ್ತುತ ಇರುವ ಸೌಲಭ್ಯಗಳೊಂದಿಗೆ ಇನ್ನು ಎಷ್ಟು ಟ್ಯಾಂಕರ್‌ಗಳ ಅವಶ್ಯಕತೆಯಿದೆ, ಶೌಚಾಲಯಗಳ ಬಳಕೆಗೆ ಯಾವ ಕ್ರಮಗಳು ತೆಗೆದುಕೊಳ್ಳಬೇಕಿದೆ ಎಂಬ ಬಗ್ಗೆ ಪರಿಶೀಲಿಸಬೇಕು. ಪೈಪ್‌ಲೈನ್‌ಗಳು, ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆಯೇ ಎಂಬ ಬಗ್ಗೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಹೇಳಿದ್ದಾರೆ.

ಈ ಬಾರಿ ರಥೋತ್ಸವಕ್ಕೆ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇರುವುದರಿಂದ ಸ್ವಚ್ಚತೆಗೂ ವಿಶೇಷ ಗಮನಹರಿಸಬೇಕು. ಸ್ವಚ್ಚತಾ ಸಿಬ್ಬಂದಿಯನ್ನು ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಬೇಕು. ವೈದ್ಯರ ತಂಡವು ಸಿಬ್ಬಂದಿಯೊಂದಿಗೆ ಸ್ಥಳದಲ್ಲಿಯೇ ಇದ್ದು ಚಿಕಿತ್ಸಾ ಕ್ರಮಗಳಿಗೆ ಮುಂದಾಗಬೇಕು. ಸುರಕ್ಷತೆ ದೃಷ್ಠಿಯಿಂದ ಅಗ್ನಿಶಾಮಕ ಸಿಬ್ಬಂದಿಯ ನಿಯೋಜನೆಯೂ ಆಗಬೇಕೆಂದು ತಿಳಿಸಿದ್ದಾರೆ.

ಬಸ್ಸುಗಳ ಸೌಕರ್ಯ, ಸುಗಮ ಸಂಚಾರ ವ್ಯವಸ್ಥೆ, ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ಮುಚ್ಚುವ ಕಾರ್ಯ, ನಿರಂತರ ವಿದ್ಯುತ್ ಸೌಲಭ್ಯ ಸೇರಿದಂತೆ ಇತರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಥೋತ್ಸವ, ಜಾತ್ರೆಗೆ ಬೇಕಾದ ಸಿದ್ದತೆಗಳು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Swathi MG

Recent Posts

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

10 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

25 mins ago

ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ…

39 mins ago

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

41 mins ago

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

1 hour ago

ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ: ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ…

1 hour ago