ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ

ಬೆಂಗಳೂರು : ಪೊಲೀಸರಿಂದ ನನಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡ ವೃದ್ಧರೊಬ್ಬರು ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಎಂ ನಿವಾಸ ಆರ್.ಟಿ.ನಗರದಲ್ಲಿ ನಡೆದಿದೆ.

ಪೊಲೀಸರಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಬಳಿ ಕಣ್ಣೀರಿಟ್ಟ ವೃದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದಾರೆ.

ಸೈಟ್ ವಿಚಾರಕ್ಕೆ ಕೆಲವರೊಂದಿಗೆ ಸೇರಿ ಪೊಲೀಸರು ತನಗೆ ಮೋಸ ಮಾಡಿದ್ದಾರೆ. ಹಲವು ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದಿರುವ ವೃದ್ಧ ತನ್ನ ಬಳಿ ಇದ್ದ ದ್ರಾವಣದ ಬಾಟಲ್ ತೆಗೆದು ಮುಖ್ಯಮಂತ್ರಿಗಳಿಗೆ ತೋರಿಸಿ ಅದನ್ನು ಸೇವಿಸಲು ಮುಂದಾಗಿದ್ದಾರೆ.

ತಕ್ಷಣ ತಡೆದ ಪೊಲೀಸರು ವೃದ್ಧರನ್ನು ಪಕ್ಕಕ್ಕೆ ಕರೆದೊಯ್ದು ಮಾಹಿತಿ ಪಡೆದುಕೊಂಡಿದ್ದಾರೆ.

Gayathri SG

Recent Posts

ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ : ಓರ್ವ ಸಾವು, 13 ಮಂದಿ ಗಾಯ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಯುನಿವರ್ಸಿಟಿ ಸಮೀಪ ಬೆಳಗ್ಗೆ ಡಿಸೇಲ್‌ ಖಾಲಿಯಾಗಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹಿಡೆದ ಪರಿಣಾಮ ಓರ್ವ…

20 mins ago

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶುಂಠಿ ಕೊಪ್ಪದ ಕೀರ್ತನ ಪಿ. ಎಸ್ ರವರಿಗೆ 593 ಅಂಕ

2023 ಹಾಗೂ 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗಿನ ಶುಂಠಿ ಕೊಪ್ಪ ನಿವಾಸಿ…

28 mins ago

ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು

ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಂಗ್ರಪಾಡಿಯ ಸಾಯಿಬಾಬ…

38 mins ago

ಪುರುಷರಕಟ್ಟೆಯಲ್ಲಿ ಬಸ್- ಬೈಕ್ ಢಿಕ್ಕಿ: ಸವಾರ ಮೋಕ್ಷಿತ್ ಮೃತ್ಯು

ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನರಿಮೊಗರು ಗ್ರಾಮದ…

51 mins ago

ಆಂಡ್ರಾಯ್ಡ್‌ ಮೋಬೈಲ್‌ ಅಪ್ಡೇಟ್‌ ಮಾಡುವಂತೆ ಕೇಂದ್ರ ಸರ್ಕಾರ ಎಚ್ಚರಿಕೆ

ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ತಾಂತ್ರಿಕ ಲೋಪಗಳು ಪತ್ತೆಯಾಗಿವೆ. ಹೀಗಾಗಿ, ದೇಶದ ಆಂಡ್ರಾಯ್ಡ್‌ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ…

53 mins ago

ಬಸ್‌,ಲಾರಿ ನಡುವೆ ಭೀಕರ ಅಪಘಾತ : ಹೊತ್ತಿ ಉರಿದ ವಾಹನ, 6 ಮಂದಿ ಸಾವು

ಬಸ್‌ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಸಜೀವ ದಹನಹೊಂದಿರುವ ಘಟನೆ ಘಟನೆ…

1 hour ago