ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನವಾಗಿದ್ದು, ಪ್ರವಾಸಿಗರು ಖುಷಿಪಟ್ಟಿದ್ದಾರೆ.
ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಕೆ.ಗುಡಿ ಸಫಾರಿ ಜೋನ್ ನಲ್ಲಿ ಹೆಚ್ಚಾಗಿ ಹುಲಿಗಳ ಸಂಚಾರವಾಗುತ್ತಿದೆ. ಹೀಗಾಗಿ ಸಫಾರಿಗೆ ಹೋದವರಿಗೆ ಹುಲಿಗಳು ಕಂಡು ಬರುತ್ತಿದೆ.
ಪ್ರತಿನಿತ್ಯ ಪ್ರವಾಸಿಗರಿಗೆ ದರ್ಶನ ನೀಡುತ್ತಿರುವ ಹುಲಿಯನ್ನು ಕಂಡ ಪ್ರವಾಸಿಗರು ಪುಳಕಿರಾಗಿದ್ದಾರೆ. ಕೆ ಗುಡಿ ಸಫಾರಿ ಜೋನ್ ನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಫಾರಿಗೆ ಆಗಮಿಸುತ್ತಿರುವುದು ಕಂಡು ಬಂದಿದೆ.