ಚಾಮರಾಜನಗರ : ಮುಸ್ಲಿಮರೆಲ್ಲಾ ಕೆಟ್ಟವರಲ್ಲ, ಎಲ್ಲ ಹಿಂದೂಗಳೂ ಒಳ್ಳೆಯವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಹೇಳಿದರು.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಶ್ಮೀರಿ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡುತ್ತಿದ್ದಾರೆ. ಅಂಥ ಘಟನೆ ಮುಂದೆ ನಡೆಯಬಾರದು ಎಂಬ ಉದ್ದೇಶದಿಂದ ಸಿನಿಮಾ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ ಎಂದರು.
ವಂಶ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿ ಅವರ ಹೇಳಿಕೆ ಕುರಿತ ಪ್ರಶ್ಙೆಗೆ ಉತ್ತರಿಸಿದ ಸೋಮಣ್ಣ, ನನ್ನ ಮಗನಿಗೆ ಅದೃಷ್ಟ ಇದ್ದರೆ ಶಾಸಕನಾಗುತ್ತಾನೆ. 6.5 ಕೋಟಿ ಜನರಲ್ಲಿ 224 ಜನರು ಮಾತ್ರ ಶಾಸಕರಾಗುವುದು. ನನ್ನ ಮಗ ಶಾಸಕನಾಗದೇ ಇದ್ದರೆ ಬೇಸರವಿಲ್ಲ ಎಂದರು.