News Karnataka Kannada
Sunday, May 12 2024
ಚಾಮರಾಜನಗರ

ಚಾಮರಾಜನಗರ: ಜಾಲಿ ರೈಡ್ ಮಾಡಿದ ಸವಾರನ ವಿರುದ್ಧ ಪ್ರಕರಣ

Lover
Photo Credit :

ಚಾಮರಾಜನಗರ: ಪ್ರೀತಿ ಪ್ರೇಮದ ಅಮಲಿನಲ್ಲಿದ್ದ ಪ್ರೇಮಿಗಳು ಥೇಟ್ ಸಿನಿಮಾ ಶೈಲಿಯಲ್ಲಿ ಬೈಕ್ ನಲ್ಲಿ ಜಾಲಿ ರೈಡ್ ಮಾಡಿದ್ದು, ಈ ಸಂಬಂದ ಸವಾರನ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಷ್ಟಕ್ಕೂ ಇಂತಹದೊಂದು ಜಾಲಿ ರೈಡ್ ನಡೆದಿದ್ದು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ. ಸಾಮಾನ್ಯವಾಗಿ ಪ್ರೀತಿ ಮಾಡೋವಾಗ ಜಗವೇ ಕತ್ತಲು ಎಂಬ ಮಾತಿದೆ. ಅದೇ ರೀತಿಯಲ್ಲಿಯೇ ಜಾಲಿರೈಡ್ ನಡೆದಿದೆ.

ಇಬ್ಬರು ಪ್ರೇಮಿಗಳು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಆದರೆ, ವಿಷ್ಯ ಅದಷ್ಟೇ ಆಗಿದ್ದರೆ ಇದೆಲ್ಲ ಪೀಠಿಕೆ ಹೇಳುವಂತೆ ಇರಲಿಲ್ಲ. ಆದರೆ ಆ ಜಾಲಿ ರೈಡ್ ಹೇಗಿತ್ತೆಂದರೆ, ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದರೆ ಆಕೆ ಆತನನ್ನು ಬಿಗಿಯಾಗಿ ಅಪ್ಪಿ ಉನ್ಮಾನದಲ್ಲಿ ತೇಲುತ್ತಿದ್ದಳು. ಇದು ನೋಡಿದವರು ಇವರಿಗೇನು ಬಂತು ಎಂದು ಹಿಡಿ ಶಾಪ ಹಾಕುತ್ತಿದ್ದರು.

ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್ ಬೈಕ್ನಲ್ಲಿ ಹೊರಟಿದ್ದ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್ ಮಾಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ನಡೆಯಿತು. ಈ ಪ್ರೇಮಿಗಳ ಪ್ರಣಯದಾಟವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಾಲಿ ರೈಡ್ ಮಾಡಿದ ಬೈಕ್ ಸವಾರನನ್ನು ಪತ್ತೆ ಹಚ್ಚಿ  ವಶಕ್ಕೆ ಪಡೆದು ಪ್ರಕರಣ ದಾಖಲಿಸುವಲ್ಲಿ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈತ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ಎನ್.ಸಿ.ಸ್ವಾಮಿ ಎಂದು ಗುರುತಿಸಲಾಗಿದ್ದು, ಗುರುವಾರ ಚಾಮರಾಜನಗರ ತಾಲ್ಲೂಕಿನ ಯಡಪುರ ಬಳಿ ಪ್ರೇಯಸಿಯನ್ನು ಬೈಕ್ ಟ್ಯಾಂಕ್ ಮೇಲೆ ಕುಳ್ಳರಿಸಿಕೊಂಡು ಜಾಲಿ ರೈಡ್ ಮಾಡಿದ್ದನು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಸಂಚಾರಿ ಪೊಲೀಸರು  ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ಜಾಲಿ ರೈಡ್ ಪಲ್ಸರ್ ಬೈಕ್ ಬಿಎಕ್ಸ್‌ಟ್ಯಾಕ್ಸ್ (ಕೆಎ -10 – ಇವಿ 5121) ನಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣ ದಾಖಲಾಗಿದ್ದು, ಬೈಕ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು