News Karnataka Kannada
Tuesday, April 30 2024
ಚಾಮರಾಜನಗರ

ಗಾಳಿಯ ಗುಣಮಟ್ಟದಲ್ಲಿ ನಂ 1 ಸ್ಥಾನಕ್ಕೆ ಜಿಗಿದ ಚಾಮರಾಜನಗರ

Chamarajanagara
Photo Credit : News Kannada

ಚಾಮರಾಜನಗರ: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ದೇಶದ ಸುಮಾರು 132 ನಗರಗಳ ಪೈಕಿ ಮೊದಲನೇ ಸ್ಥಾನವನ್ನು ಇದೀಗ ರಾಜ್ಯದ ಚಾಮರಾಜನಗರ ಪಡೆದುಕೊಂಡಿದೆ.

ವಾಯುಮಾಲಿನ್ಯದ ಪ್ರಮಾಣಕ್ಕೆ ಅನುಸಾರವಾಗಿ ನಗರಗಳ ಸ್ಥಾನ ಬದಲಾಗುತ್ತಿದ್ದು, ಈಗಿನ ಪ್ರಕಾರ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ. ಸದ್ಯ ಜಿಲ್ಲೆಯಲ್ಲಿ ವಾಯು ಮಾಲಿನ್ಯ ತರುವ ಕಾರ್ಖಾನೆಗಳಿಲ್ಲದಿರುವುದು, ಜತೆಗೆ ಅರಣ್ಯ ಪ್ರದೇಶಗಳನ್ನು ಹೊಂದಿರುವುದು ಇದಕ್ಕೆ ಕಾರಣವಾಗಿದೆ.

ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಜಿಲ್ಲೆಯು ಈಗ ಮೊದಲ ಸ‍್ಥಾನಕ್ಕೆ ಬಂದಿದೆ. ಈಗ ನಗರದ ಗಾಳಿಯ ಗುಣಮಟ್ಟ ಸೂಚ್ಯಂಕದ ಮೌಲ್ಯ (ಎಕ್ಯುಐ ವಾಲ್ಯು) 36 ಇದೆ. ಇನ್ನು 39 ಎಕ್ಯುಐ ವಾಲ್ಯು ಪಡೆದಿರುವ ತಮಿಳುನಾಡಿನ ತೂತ್ತುಕುಡಿ ಎರಡನೇ ಸ್ಥಾನದಲ್ಲಿದೆ. 46 ಎಕ್ಯುಐ ವಾಲ್ಯು ಹೊಂದಿರುವ ರಾಜ್ಯದ ವಿಜಯಪುರ ಮೂರು, 50 ಎಕ್ಯುಐ ವಾಲ್ಯು ಗಳಿಸಿರುವ ಬಾಗಲಕೋಟೆ ನಾಲ್ಕನೇ ಸ್ಥಾನದಲ್ಲಿದೆ.

ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಮಾಪಕ ಅಳವಡಿಸಿದ್ದು, ಅದರ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತದೆ. ಎಕ್ಯುಐ ವಾಲ್ಯು 50ರ ಒಳಗಡೆ ಇದ್ದರೆ ಗಾಳಿಯ ಗುಣಮಟ್ಟ ಉತ್ತಮ, 51ರಿಂದ 100ರೊಳಗಿದ್ದರೆ ತೃಪ್ತಿದಾಯಕ, 101ರಿಂದ 200ರವರೆಗೆ ಮಧ್ಯಮ, 201–300 ಅಂಕಗಳಿದ್ದರೆ ಕಳಪೆ, 301ರಿಂದ 400 ತೀರಾ ಕಳಪೆ ಎಂದು ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರು ಬೆಂಗಳೂರಿನ ಎಕ್ಯುಐ ವಾಲ್ಯು 97 ಆಗಿದೆ.

ಇವತ್ತಿನ ಪರಿಸ‍್ಥಿತಿಯಲ್ಲಿ ವಾಯುವಿನ ಗುಣ ಮಟ್ಟ ಕಾಪಾಡಿಕೊಳ್ಳುವುದು ಸವಾಲ್ ಆಗಿ ಪರಿಣಮಿಸಿದೆ. ನಗರಗಳಲ್ಲಿ ಹೆಚ್ಚುತ್ತಿರುವ ಕಾರ್ಖಾನೆಗಳು, ನಾಶವಾಗುತ್ತಿರುವ ಮರಗಿಡಗಳಿಂದಾಗಿ ವಾಯುವಿನ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಆದಷ್ಟು ಪರಿಸರ ಪೂರಕ ಕಾರ್ಯಕ್ರಮಗಳ ಮೂಲಕ ಗುಣಮಟ್ಟ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು