ಮೈಸೂರು: ದೇವಾಲಯದ ಚೈನ್ ಗೇಟ್ ಬಳಿ ಒಂಟಿ ಸಲಗವೊಂದು ದಾಂಧಲೆ ನಡೆಸಿದೆ. ಗಜರಾಜನ ಆಕ್ರೋಶಕ್ಕೆ 5 ಬೈಕ್ ಗಳು ಚಿಂದಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯ ಬಳಿ ಇರುವ ಚೈನ್ ಗೇಟ್ ಬಳಿ ನಡೆದಿದೆ.
ದೇವಾಲಯಕ್ಕೆ ಬಂದ ಭಕ್ತರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪೂಜೆಗೆ ತೆರಳಿದ್ದರು. ಈ ವೇಳೆ ದಿಢೀರ್ ಪ್ರತ್ಯಕ್ಷವಾದ ಗಜರಾಜ ಏಕಾಏಕಿ ನಿಲ್ಲಿಸಿದ್ದ ಬೈಕ್ ಗಳ ಮೇಲೆ ದಾಳಿ ನಡೆಸಿ ಚೆಂಡಾಡಿದೆ.
ನಂತರ ಮಳಿಗೆಯೊಂದನ್ನ ಧ್ವಂಸಗೊಳಿಸಿದೆ. ಬೈಕ್ ಗಳ ಮೇಲೆ ಸಿಟ್ಟನ್ನ ತೀರಿಸಿಕೊಂಡ ಒಂಟಿ ಸಲಗ ತನ್ನ ದಾರಿ ಹಿಡಿದಿದೆ. ದೇವಾಲಯಕ್ಕೆ ಬಂದ ಭಕ್ತರೊಬ್ಬರು ಗಜರಾಜನ ಆಕ್ರೋಶವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

