ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಪಡಿತರ ಕಾಳಸಂತೆ ಮುಂದುವರಿದಿದ್ದು, ಮೈಸೂರು ಜಿಲ್ಲೆಯಲ್ಲಿ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಕೆ ಆರ್ ನಗರ ಹಾಸನ ರಸ್ತೆಯ ತಾಲ್ಲೂಕು ಕೃಷಿ ಮಾರಕಟ್ಟೆ ಬಳಿ ಪತ್ತೆಯಾಗಿದೆ. 90 ಮೂಟೆ 46 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಪಡಿತರ ಅಂಗಡಿಯ ಬದಲು ಕಾಳಸಂತೆಗೆ ಲಾರಿಯಲ್ಲಿ ಸಾಗಾಣೆ ಮಾಡುವ ವೇಳೆ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ರಾಜಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ವೇಳೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಮಾರುಕಟ್ಟೆಯ ಹಿಂಬದಿ ದ್ವಾರದಿಂದ ಸಾಗಾಣೆ ಮಾಡಲಾಗುತ್ತಿತ್ತು. ಮುಂದೆ ಎಂಟ್ರಿ ಮಾಡಿಸಿ ಹೊರಗೆ ದಾಸ್ತಾನು ತೆಗೆದುಕೊಂಡು ಹೋಗಬೇಕು. ತಾಲ್ಲೂಕು ಕೃಷಿ ಮಾರುಕಟ್ಟೆ ಕಾರ್ಯದರ್ಶಿ ರವಿ ವಿರುದ್ದ ಆರೋಪ ಕೇಳಿಬಂದಿದೆ.
ರೇಷನ್ ಅಂಗಡಿ ಬದಲು ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಆರೋಪ ಕೇಳಿಬಂದಿದ್ದು, ಘಟನೆ ನಂತರ ರವಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ರವಿ ಸಿಗಲಿಲ್ಲ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

