News Karnataka Kannada
Monday, April 29 2024
ಮೈಸೂರು

ಮೈಸೂರು ಜಿಲ್ಲೆಗೆ ಮಂತ್ರಿ ಸ್ಥಾನ ಕೊಡದ್ದಕ್ಕೆ ಮಾಜಿ ಸಚಿವ ವಿಶ್ವನಾಥ್‌ ಬೇಸರ

H.vishwanath Mysore 30 6 21
Photo Credit :

ಮೈಸೂರು ; ಜಿಲ್ಲೆಯಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರಿದ್ದರೆ. ರಾಮದಾಸ್​ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಕೊನೆಯಲ್ಲಿ ಕೈ ತಪ್ಪಿದೆ. ಮೈಸೂರಿನವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಎಚ್‌.ವಿಶ್ವನಾಥ್ ಹೇಳಿದ್ದಾರೆ.
: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಡದೇ ತಪ್ಪು ಮಾಡಿದ್ರು, ಈಗಲೂ ಅದು ಮುಂದುವರೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. ಮಾನಸ ಗಂಗೋತ್ರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರಿದ್ದಾರೆ. ರಾಮದಾಸ್​ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಕೊನೆಯಲ್ಲಿ ಕೈ ತಪ್ಪಿದೆ. ಮೈಸೂರಿನವರಿಗೆ ಸಚಿವ ಸ್ಥಾನ ಮೀಸಲು ಇಡಬೇಕಿತ್ತು ಎಂದರು.ಜಮೀರ್ ಅಹಮ್ಮದ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿರುವುದು‌ ರಾಜಕೀಯ ಪ್ರೇರಿತ ಅಲ್ಲ, ಅವುಗಳ ಕರ್ತವ್ಯ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹೀಗೆ ದಾಳಿ ಮಾಡಲಾಗುತ್ತಿತ್ತು‌. ಆಗ ಬೇರೆ ಪಕ್ಷಗಳು ಪ್ರಶ್ನೆ ಮಾಡಿದ್ವಾ? ಐಎಂಎಯಲ್ಲಿರುವ ಬಡವರ ಹಣದ ವಿಚಾರವಾಗಿ ಇ.ಡಿ.ದಾಳಿ ಮಾಡಿದೆ ಎಂದು ಹೇಳಿದರು‌.ಇದನ್ನೂ ಓದಿ : ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರದಸರಾ ಮಾಡಲೇ ಬೇಕು: ಈ ಬಾರಿ ದಸರಾವನ್ನ ಸಂಪ್ರದಾಯಿಕವಾಗಿಯಾದರೂ ಮಾಡಲೇಬೇಕು ಎಂದು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು