ನವದೆಹಲಿ : ಭಾರತ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಒದಗಿಸುತ್ತಿದೆ. ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕವನ್ನು ಒದಗಿಸಿದ ನಂತರ, ದೇಶಾದ್ಯಂತ ಓಡುವ ರೈಲುಗಳಲ್ಲಿ ಉಚಿತ ವೈ-ಫೈ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮಾಜಿ ರೈಲ್ವೆ ಸಚಿವರಾಗಿದ್ದ ಪಿಯೂಶ್ ಗೋಯಲ್ 2019ರಲ್ಲಿ ರೈಲುಗಳಲ್ಲಿ ಮುಂದಿನ ನಾಲ್ಕು ವರ್ಷಗಳ ಒಳಗೆ ರೈಲಿನಲ್ಲಿ ವೈ-ಫೈ ನೀಡುವ ಯೋಜನೆಯ (Indian Railways Project) ಮೇಲೆ ಕಾರ್ಯ ನಡೆಯುತ್ತಿದೆ ಎಂದು ಘೋಷಿಸಿದ್ದರು. ಆದರೆ, ಇದೀಗ ಈ ಯೋಜನೆಯ ಅನುಷ್ಠಾನದಲ್ಲಿ ಹಲವು ಸವಾಳುಗಲಿರುವ ಕಾರಣ ಕೇಂದ್ರ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದೆ.
ಪ್ರಸ್ತುತ ಭಾರತೀಯ ರೈಲ್ವೇ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ತೆಗೆದು ಹಾಕಿದೆ. ಏಕೆಂದರೆ, ಈ ಹೂಡಿಕೆ ಕಾಸ್ಟ್ ಇಫೆಕ್ಟಿವ್ ಆಗಿಲ್ಲ ಎಂಬುದು ಇಲಾಖೆಯ ಅಭಿಪ್ರಾಯ. ಈ ಕುರಿತು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಿದೆ.
|
|
ಇನ್ಮುಂದೆ ರೈಲ್ ನಲ್ಲಿ ವೈಫೈ ಸೇವೆ ಇರುವುದಿಲ್ಲ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.