ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಹುಂಡಿ ಎಣಿಕೆ ಮುಕ್ತಾಯಗೊಂಡಿದ್ದು, ಸೆ.23ರಿಂದ ನ.10ರವರೆಗೆ 1.77 ಕೋಟಿ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಬಾರಿಯ ಹುಂಡಿ ಎಣಿಕೆಯಲ್ಲಿ 98 ಲಕ್ಷ ರೂ. ಸಂಗ್ರಹವಾಗಿತ್ತು. ಈ ಬಾರಿ ದಸರಾ, ದೀಪಾವಳಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು.
2ಸಾವಿರ ರೂ ಮುಖಬೆಲೆಯ 223 ನೋಟು, 500 ರೂ. 14372 ನೋಟುಗಳು, 200 ರೂ. 4728 ನೋಟುಗಳು, 100 ರೂ. 57003 ನೋಟುಗಳು, 50 ರೂ. 30,280 ನೋಟುಗಳು, 20 ರೂ. 26,012 ನೋಟುಗಳು, 10 ರೂ, 96,505 ನೋಟು ಸೇರಿದಂತೆ ಒಟ್ಟು 1,77,95,425 ರೂ. ದೇವರ ಹುಂಡಿಯಲ್ಲಿ ಸಂಗ್ರಹವಾಗಿದೆ.